Header Ads
Breaking News

ಗೊಂದಲದ ಗೂಡಾದ ಸಾಸ್ತಾನ ಟೋಲ್‌ನ ಫಾಸ್ಟ್ ಟ್ಯಾಗ್ ವ್ಯವಸ್ಥೆ

ಕುಂದಾಪುರ: ಡಿ.15ರಿಂದ ಟೋಲ್‌ನಲ್ಲಿ ನಗದು ಪಾವತಿಯ ಬದಲು ಫಾಸ್ಟ್ ಟ್ಯಾಗ್ ಮೂಲಕ ಡಿಜಿಟಲ್ ಪಾವತಿಯ ವ್ಯವಸ್ಥೆ ಪ್ರಯಾಣಿಕರನ್ನು ಗೊಂದಲಕ್ಕೀಡು ಮಾಡಿದ ಘಟನೆ ಭಾನುವಾರ ಸಾಸ್ತಾನ ಟೋಲ್ ಪ್ಲಾಝಾದಲ್ಲಿ ನಡೆದಿದೆ. ಇದರಿಂದಾಗಿ ಭಾನುವಾರ ಬೆಳಗ್ಗೆ ಸಾಸ್ತಾನ ಟೋಲ್‌ನಲ್ಲಿ ವಾಹನ ದಟ್ಟಣೆ ಉಂಟಾಗಿದ್ದು, ಪ್ರಯಾಣಿಕರು ಹಾಗೂ ಟೋಲ್ ಸಿಬ್ಬಂದಿಗಳ ಬಿರುಸಿನ ವಾಕ್ಸಮರ ನಡೆಯಿತು. ಸ್ಥಳೀಯರಿಗೆ ಲೇನ್ ಒಂದರಲ್ಲಿ ಉಚಿತ ಸಂಚಾರದ ವ್ಯವಸ್ಥೆ ಕಲ್ಪಿಸಿದ್ದರೂ ಮಾಹಿತಿಯ ಕೊರತೆಯಿಂದಾಗಿ ಎಲ್ಲ ವಾಹನಗಳು ಒಂದೇ ಲೇನ್‌ನಲ್ಲಿ ಆಗಮಿಸಿದ್ದರಿಂದ ವಾಹನಗಳ ದಟ್ಟಣೆ ಹೆಚ್ಚಾಯಿತು. ಕೆಲವು ವಾಹನ ಚಾಲಕರು ಟೋಲ್ ಸಿಬ್ಬಂದಿಯ ಜತೆಗೆ ವಾದ ವಿವಾದದಲ್ಲಿ ತೊಡಗಿದ್ದರಿಂದ ಕೆಲಹೊತ್ತು ಗೊಂದಲ ಸೃಷ್ಟಿಯಾಯಿತು.
ಈ ಹಠಾತ್ ಬೆಳವಣಿಗೆಯಿಂದಾಗಿ ಫಾಸ್ಟ್ ಟ್ಯಾಗ್ ಮೂಲಕ ಸಂಚರಿಸಬೇಕೆಂಬ ಖುಷಿಯಲ್ಲಿದ್ದ ವಾಹನ ಸವಾರರು ನಿರಾಶರಾದರು. ಫಾಸ್ಟ್ ಟ್ಯಾಗ್ ಇರುವ ವಾಹನಗಳಿಗೆ ಪ್ರತ್ಯೇಕ ಲೇನ್‌ಗಳನ್ನು ಮೀಸಲಿಡಲಾಗಿದ್ದರೂ, ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ವಾಹನದ ಮಾಲೀಕರು ಹಣವನ್ನು ಪಾವತಿಸಿಯೇ ಸಾಗುತ್ತಿರುವ ದೃಶ್ಯಗಳು ಕಂಡುಬಂದವು.

Related posts

Leave a Reply

Your email address will not be published. Required fields are marked *