Header Ads
Header Ads
Breaking News

ಸಾಸ್ತಾನ ಮೀನು ಮಾರುಕಟ್ಟೆ ಸಮೀಪದ ಅಂಗಡಿ ಕೋಣೆ ತೆರವು, ಬಿಗಿ ಪೋಲೀಸ್ ಬಂದೋಬಸ್ತ್‌ನಲ್ಲಿ ಕಾರ್ಯಾಚರಣೆ


ಅಂಗಡಿ ಕೋಣೆ ತೆರವು ವಿಚಾರವಾಗಿ ಅಂಗಡಿ ಮಾಲಕರು ಹಾಗೂ ಗ್ರಾ. ಪಂ. ನಡುವೆ ಜಟಾಪಟಿಗೆ ಕಾರಣವಾಗಿದ್ದ ಕುಂದಾಪುರದ ಐರೋಡಿ ಗ್ರಾ. ಪಂ. ವ್ಯಾಪ್ತಿಯ ಸಾಸ್ತಾನ ಮೀನು ಮಾರುಕಟ್ಟೆ ಸಮೀಪದ ಅಂಗಡಿ ಕೋಣೆಗಳನ್ನು ತಾ. ಪಂ. ಕಾರ್‍ಯನಿರ್ವಹಣಾಧಿಕಾರಿ ನ್ಯಾಯಾಲಯದ ಆದೇಶದ ಮೇರೆಗೆ ಬಿಗು ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವುಗೊಳಿಸಲಾಯಿತು.
ಹಲವಾರು ವರ್ಷದಿಂದ ಶಿಥಿಲಾವಸ್ಥೆಯಲ್ಲಿದ ಸಾಸ್ತಾನ ಮೀನು ಮಾರುಕಟ್ಟೆಯನ್ನು ಹೊಸದಾಗಿ ನಿರ್ಮಿಸುವ ಸಲುವಾಗಿ ಸರಕಾರದಿಂದ ೨ ಕೋಟಿ ರೂ ಅನುದಾನ ಬಿಡುಗಡೆಯಾಗಿತ್ತು. ಹೀಗಾಗಿ ಮೀನು ಮಾರುಕಟ್ಟೆಗೆ ತಾಗಿಕೊಂಡಿರುವ ವಾಣಿಜ್ಯ ಮಳಿಗೆಗಳನ್ನು ಕೂಡ ತೆರವುಗೊಳಿಸಿ ಹೊಸದಾಗಿ ನಿರ್ಮಿಸಲು ಐರೋಡಿ ಗ್ರಾ. ಪಂ. ತಿರ್ಮಾನಿಸಿತ್ತು. ಆದರೆ ಅಂಗಡಿ ತೆರವುಗೊಳಿಸುವುದನ್ನು ವಿರೋಧಿಸಿ ಮಾಲಿಕರು ನ್ಯಾಯಾಲಯದ ಮೊರೆಹೋಗಿದ್ದರು. ಹೀಗಾಗಿ ಕಾಮಗಾರಿ ಆರಂಭಿಸಲು ಅಸಾಧ್ಯವಾಗಿತ್ತು. ಆದರೆ ಕುಂದಾಪುರ ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆ ನಡೆದು ತಾ. ಪಂ. ಇ. ಒ. ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥಗೊಳಿಸುಕೊಳ್ಳುವಂತೆ ಸೂಚಿಸಿದ್ದು, ಇದೀಗ ತಾ. ಪಂ. ನ್ಯಾಯಾಲಯದಲ್ಲಿ ಅಂಗಡಿ ಕೋಣೆಗಳನ್ನು ತೆರವುಗೊಳಿಸುವಂತೆ ಆದೇಶ ನೀಡಿದೆ. ಈ ಹಿನ್ನೆಲೆ ಪೊಲೀಸ್ ಬಂದೋಬಸ್ತ್‌ನಲ್ಲಿ ಅಂಗಡಿ ಕೋಣೆಗಳನ್ನು ತೆರವುಗೊಳಿಸಲು ಮುಂದಾದಾಗ ಅಂಗಡಿ ಮಾಲಕರು ಆಕ್ಷೇಪ ವ್ಯಕ್ತಪಡಿಸಿದರು.

Related posts

Leave a Reply