Breaking News

ಸಾಸ್ತಾನ ಸುಂಕ ವಸೂಲಾತಿ ಕೇಂದ್ರದಲ್ಲಿ ಮತ್ತೇ ಗೂಂಡಾಗಿರಿ?

ಕುಂದಾಪುರ: ಸಾಸ್ತಾನ ಸುಂಕ ವಸೂಲಾತಿ ಕೇಂದ್ರದಲ್ಲಿ ಟೋಲ್ ಸಿಬ್ಬಂದಿಗಳು ಸೇರಿದಂತೆ ಹಲವರು ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿ ಕಣ್ಣಿಗೆ ಗಂಭೀರ ಗಾಂiiಗೊಳಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಸಾಸ್ತಾನ ಟೋಲ್ ಕೇಂದ್ರಕ್ಕೆ ಬೈಕಾಡಿ ನಿವಾಸಿ ಪ್ರಭಾಕರ್ ಶೆಟ್ಟಿ ಎನ್ನುವವರು ತಮ್ಮ ಮಗನೊಂದಿಗೆ ಬೈಂದೂರು ಕಡೆ ತೆರಳುತ್ತಿರುವಾಗ ಟೋಲ್ ಟೋಲ್ ಕೇಂದ್ರದ ಗೇಟ್ ಟೋಲ್ ಸಿಬ್ಬಂದಿಯ ಅಚಾತುರ್ಯದಿಂದ ಕಾರಿನ ಮೇಲೆ ಬಿದ್ದಿದೆ. ಈ ಸಂದರ್ಭ ಮಾತಿನ ಚಕಮಕಿಯುಂಟಾಗಿದ್ದು, ಸುಮಾರು ಅರ್ಧ ಗಂಟೆಗಳ ಕಾಲ ಟೋಲ್ ಕೇಂದ್ರದಲ್ಲಿ ಭಾರಿ ಮಾತಿನಚಕಮಕಿ ನಡೆದಿದೆ. ಈ ಸಂದರ್ಭ ಸೇರಿದ ಟೋಲ್ ಸಿಬ್ಬಂದಿಗಳು ಮತ್ತು ಹಿಂದಿನ ವಾಹನದ ಸವಾರರು ಇವರ ಮೇಲೆ ಅವ್ಯಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಏಕಾ‌ಎಕಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಪ್ರಭಾಕರ್ ಶೆಟ್ಟಿಯವರಿಗೆ ಕೈ ಕಾಲುಗಳಿಗೆ ಗಾಯವಾಗಿದ್ದು, ಕಣ್ಣಿಗೆ ಕೂಡ ಗಂಭೀರ ಗಾಯಗಳಾಗಿದೆ.
ಈ ಹಿಂದೆ ಕೂಡ ಗೂಂಡಾಗಿರಿ.
ಈ ಹಿಂದೆ ಸುರತ್ಕಲ್ ಮೂಲದ ಮಹಿಳೆ ಮೇಲೆ ಗೂಂಡಾಗಿರಿ ನಡೆಸಿದ್ದ ಟೋಲ್ ಸಿಬ್ಬಂದಿಗಳು, ಆಕೆಯನ್ನು ಅವ್ಯಾಚ್ಯವಾಗಿ ನಿಂದಿಸಿ, ಮಾನ ಹಾನಿಯಾಗುವಂತೆ ವರ್ತಿಸಿದ್ದರು. ಈ ಹಿನ್ನೆಲೆ ಅವರ ವರ್ತನೆಗೆ ಆ ಮಹಿಳೆ ಕೋಟ ಠಾಣೆಯಲ್ಲಿ ದೂರು ನೀಡಿದ್ದರು. ಈಗ ಹಲ್ಲೆ ನಡೆಸಿರುವುದು ಸ್ಥಳೀಯರನ್ನು ಕೆರಳಿಸಿದೆ. ಈ ಸಂದರ್ಭ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಟೋಲ್ ಸಿಬ್ಬಂದಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ರು.
ಸರಿಯಾದ ಸಿಸಿ ಟಿವಿ ವ್ಯವಸ್ಥೆ ಇಲ್ಲ
ಅಷ್ಟು ದೊಡ್ಡ ಟೋಲ್ ಕೇಂದ್ರವನ್ನು ನವಯುಗ ಸಂಸ್ಥೆ ನಿರ್ಮಿಸಿದರೂ. ಟೋಲ್ ಕೇಂದ್ರದ ಸುತ್ತಲಿನ ಘಟನೆ ಪರಿವೀಕ್ಷಣೆಗೆಂದು ಟೋಲ್ ಕೇಂದ್ರದ ಹೊರಗೆ, ಕೇವಲ ಒಂದು ಸಿಸಿಟಿವಿಯನ್ನು ಅಳವಡಿಸಿದ್ದು, ಅದರಲ್ಲಿ ಹಲ್ಲೆಮಾಡಿದವರ ಮುಖಗಳು ಸರಿಯಾಗಿ ದಾಖಲುಗೊಂಡಿಲ್ಲ. ಘಟನೆ ಕುರಿತು ಕೋಟ ಠಾಣೆಯಲ್ಲಿ ಪ್ರಭಾಕರ್ ಶೆಟ್ಟಿ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

Leave a Reply