Header Ads
Header Ads
Breaking News

ಸಾಹಿತಿ ಭಗವಾನ್ ಹೇಳಿಕೆ ವಿರುದ್ಧ ಖಂಡನೆ:ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಯಾರದ್ದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಪ್ರಯತ್ನಕ್ಕೆ ಪಕ್ಷ ವಿರುದ್ಧವಾಗಿದೆ, ಯಾವುದೇ ಧರ್ಮದ ಬಗ್ಗೆ ಅನಗತ್ಯ ಹೇಳಿಕೆ ನೀಡಿ ವಿವಾದ ಸೃಷ್ಟಿಸುವುದು ಸಲ್ಲದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅಭಿಪ್ರಾಯಪಟ್ಟರು.ಶಬರಿಮಲೆಗೆ ಮಹಿಳೆಯರ ಪ್ರವೇಶ, ಸಾಹಿತಿ ಭಗವಾನ್ ಶ್ರೀ ರಾಮಚಂದ್ರನ ವಿರುದ್ಧ ಹಾಗೂ ಪ್ರವಾದಿ(ಸ) ವಿರುದ್ಧದ ಹೇಳಿಕೆ ಖಂಡಿಸಿ ಸೋಮವಾರ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೀರಿಯಲ್ಲಿ ನಡೆದ ಪ್ರತಿಭಟನಾ ಸಭೆ ಉದ್ಘಾಟಿಸಿ ಮಾತನಾಡಿದರು..

ಮೂಡಾದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮುಸ್ತಫಾ ಮಲಾರ್, ಬಂಟ್ವಾಳ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಉಮ್ಮರ್ ಪಜೀರ್, ಹಿಂದುಳಿದ ವರ್ಗಗಳ ವಿಭಾಗಾಧ್ಯಕ್ಷ ದಿನೇಶ್ ಕುಂಪಲ, ನಗರಸಭಾ ಮಾಜಿ ಸದಸ್ಯ ದಿನೇಶ್ ರೈ, ಅಲ್ಪಸಂಖ್ಯಾತ ವಿಭಾಗ ಅಧ್ಯಕ್ಷ ಆಲ್ವಿನ್ ಡಿಸೋಜ ಮೊದಲಾದವರು ಭಾಗವಹಿಸಿದ್ದರು.

Related posts

Leave a Reply