Header Ads
Header Ads
Breaking News

ಸಾಹಿತ್ಯಕ ಪ್ರಜ್ಞೆಯೊಂದಿಗೆ ಬದುಕು ಕಟ್ಟಿಕೊಳ್ಳುವುದರ ಕಡೆಗೆ ಯುವಪೀಳಿಗೆ ಆದ್ಯತೆ ನೀಡಬೇಕು : ಡಾ.ನಾ. ಮೊಗಸಾಲೆ ಸಲಹೆ

ಉಜಿರೆ : ಸಾಹಿತ್ಯಕ ಪ್ರಜ್ಞೆಯೊಂದಿಗೆ ಬದುಕು ಕಟ್ಟಿಕೊಳ್ಳುವುದರ ಕಡೆಗೆ ಯುವಪೀಳಿಗೆ ಆದ್ಯತೆ ನೀಡಬೇಕು ಎಂದು ಹಿರಿಯ ಸಾಹಿತಿ ಡಾ.ನಾ.ಮೊಗಸಾಲೆ ಅಭಿಪ್ರಾಯಪಟ್ಟರು.

ಉಜಿರೆ ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗ ಹಾಗೂ ಕಾಂತಾವರದ ಮೊಗಸಾಲೆ 75 ಅಭಿನಂದನಾ ಸಮಿತಿ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಮೊಗಸಾಲೆ ಸಾಹಿತ್ಯ ವಿಹಾರ ಸರಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರೀತಿ ಎಂಬುದು ಜಗತ್ತಿನಲ್ಲಿ ನಾಶವಾಗುತ್ತಿದೆ. ಸಂಬಂಧ ಬಾಂಧವ್ಯಗಳು ಅಳಿಸಿ ಹೋಗುತ್ತಿವೆ. ಹಣ ಗಳಿಕೆಯೊಂದೇ ಮನುಷ್ಯನ ಮುಖ್ಯಗುರಿಯಾಗಿದೆ. ಇಂತಹ ಜೀವನಕ್ರಮದಿಂದ ದೂರ ಸರಿದು ಧ್ಯಾನಜ್ಞಾನದ ಕಡೆಗೆ ಸಾಗಬೇಕಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಕವಿಯಾಗಿಸುವ, ಸಂವೇದನಾಶೀಲರನ್ನಾಗಿ ರೂಪಿಸುವ ಜ್ಞಾನವನ್ನು ಯಾವ ವಿದ್ಯಾ ಸಂಸ್ಥೆಯೂ ನೀಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

’ಮೊಗಸಾಲೆಯವರಕಾವ್ಯ’ ಉಪನ್ಯಾಸ ನಡೆಸಿಕೊಟ್ಟ ಚಿಂತಾಮಣಿಕೊಡ್ಲಕೆರೆಯವರು,ಅವರಕವನ ಸಂಕಲನಗಳ ಕುರಿತು ಮಾತನಾಡಿದರು. ಮೊಗಸಾಲೆಯವರ ಕಾವ್ಯಗಳು ವರ್ತಮಾನದ ಮುಖವನ್ನು ಪ್ರತಿನಿಧಿಸುತ್ತವೆ ಎಂದು ಅಭಿಪ್ರಾಯಪಟ್ಟರು. ನಂತರ ಮೊಗಸಾಲೆಯವರ ಆತ್ಮಕಥನ ’ಬಯಲ ಬೆಟ್ಟ’ ಕುರಿತು ಡಾ. ಯೋಗೆಶ್‌ಕೈರೋಡಿ ಉಪನ್ಯಾಸ ನೀಡಿದರು. ಈ ಆತ್ಮಕಥನವು ವ್ಯಕ್ತಿಯೊಬ್ಬ ತನ್ನ ಬಗ್ಗೆ ತಾನು ಬರೆದ ಬರಹವಾಗಿ ಉಳಿದಿಲ್ಲ. ಬದಲಾಗಿ ಮೊಗಸಾಲೆಯವರಿಗೆ ಜೊತೆಯಾದ ವಸ್ತು, ವ್ಯಕ್ತಿಗಳ ಕಥನವಾಗಿ ಅಭಿವ್ಯಕ್ತಿಗೊಂಡಿದೆ. ಕೂಡು ಕುಟುಂಬದ ಬಾಂಧವ್ಯ, ಕರಾವಳಿಯ ಸಂಸ್ಕೃತಿ, ಸಮಾಜದ ಪ್ರತೀ ಸ್ತರದೊಂದಿಗೆ ಮೊಗಸಾಲೆಯವರಿಗೆ ಇದ್ದಅನುಬಂಧವನ್ನುಇದು ಸೂಚಿಸುತ್ತದೆ ಎಂದರು. ಈ ಸಂದರ್ಭದಲ್ಲಿ ಮೊಗಸಾಲೆಯವರನ್ನುಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಸತೀಶ್‌ಚಂದ್ರ ಅಧ್ಯಕ್ಷೀಯ ನುಡಿಗಳನ್ನಾಡಿದರು. ಪ್ರಸ್ತುತ ಸಂದರ್ಭದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ನಾಗರಿಕ ಸಮಾಜವನ್ನು ಆವರಿಸಿದೆ. ಮೊಬೈಲ್ ಸಹಾಯದಿಂದ ಮಾಹಿತಿಗಳನ್ನು ಪಡೆಯಬಹುದಾದರೂ ಪುಸ್ತಕ ಓದುವಾಗಿನ ಅನುಭವವೇ ಬೇರೆ. ಹಾಗಾಗಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.ಕಾರ್ಯಕ್ರಮವನ್ನು ಮೊಗಸಾಲೆ ಅಭಿನಂದನಾ ಸಮಿತಿಯ ಸಹಕಾರ್ಯದರ್ಶಿ ಸತೀಶ್‌ಕುಮಾರ್ ಕೆಮ್ಮಣ್ಣು ಸ್ವಾಗತಿಸಿದರು. ಪ್ರೊ. ಕೆ.ವಿ. ನಾಗರಾಜಪ್ಪ ವಂದಿಸಿದರು. ಡಾ. ದಿವಾ ಕೊಕ್ಕಡ ನಿರೂಪಿಸಿದರು.

Related posts

Leave a Reply

Your email address will not be published. Required fields are marked *