Header Ads
Header Ads
Breaking News

ಸಿಂಗಪುರ ಪ್ರಧಾನಿ ಲೀ ಹೈನ್ ಲೂಂಗ್, ಒಡಹುಟ್ಟುಗಳಿಂದ ಅಧಿಕಾರ ದುರ್ಬಳಕೆ ಆರೋಪ

ಅಧಿಕಾರ ದುರ್ಬಳಕೆ ಮತ್ತು ಸ್ವಜನಪಕ್ಷಪಾತದ ಆರೋಪಕ್ಕೆ ಗುರಿಯಾಗಿರುವ ಪ್ರಧಾನಿ ಲೀ ಹೈನ್ ಲೂಂಗ್ ಸೋಮವಾರ ಸಂಸತ್ತಿಗೆ ಹಾಜರಾಗಿ, ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಹಾಗಿದ್ದೂ ಈ ಪ್ರಕರಣವು ಸಿಂಗಪುರಕ್ಕೆ ಆಘಾತವನ್ನು ತಂದೊಡ್ಡಿದೆ. ಲೂಂಗ್ ಅವರ ಸಹೋದರ ಮತ್ತು ಸಹೋದರಿಯೇ ಈ ಬಗೆಯ ಆರೋಪಗಳನ್ನು ಮಾಡಿದ್ದಾರೆ.
ನನ್ನ ಮೇಲಿನ ಆರೋಪಗಳೆಲ್ಲ ಆಧಾರರಹಿತವಾಗಿದ್ದು, ಇವು ಈಗಾಗಲೇ ಸಿಂಗಪುರವನ್ನು ಆಘಾತಕ್ಕೆ ದೂಡಿವೆ. ಸರ್ಕಾರದ ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಲೂಂಗ್ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. ಸಿಂಗಪುರದ ಮೊದಲ ಪ್ರಧಾನಿ ಲೀ ಕುನ್ ಯೆ ಅವರ ಮಕ್ಕಳಾದ ವೇಯ್ ಲಿಂಗ್ ಮತ್ತು ಹೈನ್ ಯಾಂಗ್ ಅವರು ತಮ್ಮ ಹಿರಿಯ ಸೋದರ ಲೀ ಹೈನ್ ಲೂಂಗ್ ಅವರ ಮೇಲೆ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆರೋಪ ಮಾಡುತ್ತಿದ್ದಾರೆ.
ಕುಟುಂಬದ ಬಂಗಲೆಯೊಂದರ ಸಂಬಂಧ ಇವರಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ತಮ್ಮ ನಿಧನದ ಬಳಿಕ ವ್ಯಕ್ತಿ ಆರಾಧನೆಯನ್ನು ತಡೆಯಲು ಈ ಬಂಗಲೆಯನ್ನು ನಾಶಪಡಿಸಬೇಕೆಂಬುದು, ಲೀ ಕುನ್ ಯೆ ಅವರ ಬಯಕೆಯಾಗಿತ್ತು. ಸಿಂಗಪುರವನ್ನು ವಿಶ್ವದ ಶ್ರೀಮಂತ ಸಮಾಜದಲ್ಲಿ ಒಂದಾಗಿಸಿದ ಕೀರ್ತಿ ಹೊಂದಿರುವ ಲೀ, ೨೦೧೫ರ ಮಾರ್ಚ್ನಲ್ಲಿ ನಿಧನರಾಗಿದ್ದರು. ಈ ಬಂಗಲೆ ಕೆಡವುವ ಕಾರ್ಯಕ್ಕೆ ಅಡ್ಡಿಪಡಿಸುವ ಮೂಲಕ ಲೂಂಗ್ ಪಿತ್ರಾರ್ಜಿತ ಆಸ್ತಿಯ ದುರ್ಬಳಕೆಗೆ ಮುಂದಾಗಿದ್ದಾರೆ ಹಾಗೂ ಮುಂದೆ ತಮ್ಮ ಪುತ್ರನೇ ದೇಶದ ನಾಯಕನಾಗಬೇಕೆಂದು ಬಯಸಿದ್ದಾರೆ ಎಂಬುದು ಸಹ ಪ್ರಧಾನಿ ವಿರುದ್ಧದ ಆರೋಪಗಳಲ್ಲಿ ಸೇರಿವೆ.

Related posts

Leave a Reply