Header Ads
Header Ads
Breaking News

ಸಿಂಡಿಕೇಟ್ ಬ್ಯಾಂಕ್‌ನ ಲಾಕರ್ ಪ್ಲಾಜಾ ಉದ್ಘಾಟನೆ : ಹಂಪನಕಟ್ಟೆಯ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮ

ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಸಿಂಡಿಕೇಟ್ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯಲ್ಲಿ ನೂತನವಾಗಿ ನಿರ್ಮಿಸಿರುವ ಅತ್ಯಾಧುನಿಕ ಲಾಕರ್ ಪ್ಲಾಜಾದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ನೂತನ ಲಾಕರ್ ಪ್ಲಾಜಾವನ್ನು ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ವೈ ನಾಗೇಶ್ವರ ರಾವ್ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಹೈನೆಟ್‌ವರ್ಕ್ ಗ್ರಾಹಕರು ಹಾಗೂ ಎನ್‌ಆರ್‌ಐ ಗ್ರಾಹಕರಿಗಾಗಿ ವಿಶೇಷವಾದ ಈ ಸೌಲಭ್ಯವನ್ನು ನಿರ್ಮಿಸಲಾಗಿದೆ ಎಂದು ಹೇಳಿದರು. ಆನಂತರ ಮಣಿಪಾಲ ವಲಯ ಕಚೇರಿಯ ಮಹಾಪ್ರಬಂಧಕರಾದ ಭಾಸ್ಕರ್ ಹಂದೆಯವರು ಮಾತನಾಡಿ, ಆಡಳಿತ ಕಚೇರಿಯಲ್ಲಿ ಲಾಕರ್ ಸೌಲಭ್ಯವನ್ನು ಬ್ಯಾಂಕಿಂಗ್ ರಂಗದಲ್ಲಿಯೇ ಪ್ರಪ್ರಥಮವಾಗಿ ಸಿಂಡಿಕೇಟ್ ಬ್ಯಾಂಕ್ ಪ್ರಾರಂಭಿಸಿದೆ ಹಾಗೂ ಬ್ಯಾಂಕಿನ ಇಂತಹ ಎರಡನೇ ಲಾಕರ್ ಪ್ಲಾಜಾ ಇದಾಗಿದ್ದು, ಮಂಗಳೂರಿನ ಜನತೆ ಇದರ ಸದುಪಯೋಗ ಪಡೆಯುವಂತೆ ವಿನಂತಿಸಿದರು.

ಈ ಸಂದರ್ಭ ರೀಜನಲ್ ಮ್ಯಾನೇಜರ್ ರಮಾಕಾಂತ್ ಭಟ್, ಮುಖ್ಯ ಪ್ರಬಂಧಕರಾದ ಗಣೇಶ್ ಕಾಮತ್, ಡೈಸಿ ಡಿಸೋಜಾ, ಹಂಪನಕಟ್ಟಾ ಶಾಖೆಯ ಮುಖ್ಯ ಪ್ರಬಂಧಕರಾದ ಪುಷ್ಪರಾಜ್ ಹೆಗ್ಡೆ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *