Header Ads
Header Ads
Breaking News

ಸಿಂಡಿಕೇಟ್ ಬ್ಯಾಂಕ್‍ನಿಂದ ‘ಸಿಂಡ್ ವಾಹನ ಮೇಳ-2018’:ಅ.27 ಮತ್ತು 28ರಂದು ನೆಹರೂ ಮೈದಾನದಲ್ಲಿ ಕಾರ್ಯಕ್ರಮ

ಹಬ್ಬದ ಸಂದರ್ಭದಲ್ಲಿ ಹೊಸ ಕಾರನ್ನು ಬರಮಾಡಿಕೊಳ್ಳಬೇಕು ಎಂಬ ಕನಸು ನಿಮ್ಮದಾಗಿದ್ದರೆ ನಿಮ್ಮ ಕನಸನ್ನು ನನಸಾಗಿಸುವುದಕ್ಕೆ ಉತ್ತಮ ಅವಕಾಶವೊಂದು ಇಲ್ಲಿದೆ. ಹೌದು, ವಾಹನ ಕೊಳ್ಳುವ ಗ್ರಾಹಕರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಪ್ರಮುಖ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್ ‘ಸಿಂಡ್ ವಾಹನ ಮೇಳ’ವನ್ನು ಆಯೋಜಿಸಿದೆ. ಅ.27 ಮತ್ತು 28ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ವಾಹನ ಮೇಳ ನಡೆಯುತ್ತಿದೆ.ನಾವು ಕೂಡ ಒಂದು ಕಾರನ್ನು ಕೊಳ್ಳಬೇಕು ಎನ್ನುವುದು ಎಲ್ಲರ ಕನಸಾಗಿರುತ್ತದೆ. ಜೊತೆಗೆ ಇರುವ ಹಳೆಯ ಕಾರನ್ನು ಹೊಸ ಕಾರಿನ ಜೊತೆಗೆ ಬದಲಾಯಿಸಿಕೊಳ್ಳಬೇಕು ಎಂದುಕೊಳ್ಳುತ್ತಿರುವವರಿಗೆ ಅಪೂರ್ವ ಅವಕಾಶವನ್ನು ಪ್ರಮುಖ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್ ಒದಗಿಸಿದೆ. ಮಂಗಳೂರಿನ ನೆಹರೂ ಮೈದಾನದಲ್ಲಿ ಸಿಂಡ್ ವಾಹನ ಮೇಳ – 2018ನ್ನು ಅ.27 ಮತ್ತು 28ರಂದು ಆಯೋಜಿಸಲಾಗಿದೆ.ನಗರದ ನೆಹರು ಮೈದಾನದಲ್ಲಿ ಸಿಂಡ್ ಆಟೋ ಎಕ್ಸ್‍ಪೋ-2018ಕ್ಕೆ ಚಾಲನೆ ನೀಡಲಾಯಿತು. ಉದ್ಘಾಟನಾ ಸಮಾರಂಭದ ಕಾರ್ಯಕ್ರಮವನ್ನು ನಿಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ.ಎನ್.ವಿನಯ್ ಹೆಗ್ಡೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಹಿಂದೆ ದೇಶದಲ್ಲಿ 3 ರಿಂದ 4 ಕಾರಿನ ಕಂಪೆನಿಗಳು ಇದ್ದವು. ಅದರೆ ಈಗ 15ರಿಂದ20 ದೊಡ್ಡ ಸಂಸ್ಥೆಗಳು ಕಾರಿನ ವಿನ್ಯಾಸವನ್ನು ಮಾಡುತ್ತಿದೆ. ಜನಸಾಮಾನ್ಯರಿಗೆ ಈ ಮೂಲಕ ಹೊಸ ಕಾರಿನ ಪರಿಚಯವಾಗುತ್ತದೆ ಎಂದು ಹೇಳಿದರು.  ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀದೇವಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಸದಾನಂದ ಶೆಟ್ಟಿ, 93 ವರ್ಷಗಳ ಇತಿಹಾಸವುಳ್ಳ ಸಿಂಡಿಕೇಟ್ ಬ್ಯಾಂಕ್‍ನಿಂದ ಪ್ರಯೋಜನ ಪಡೆದವರು ಬಹಳ ಮಂದಿ ಇದ್ದಾರೆ. ಸಿಂಡ್ ವಾಹನ ಮೇಳದ ಪ್ರಯೋಜನವನ್ನು ಬಹಳಷ್ಟು ಜನ ತೆಗೆದುಕೊಳ್ಳಬಹುದು ಎಂದರು. ಇದೇ ವೇಳೆ ಮಾತನಾಡಿದ ಸಿಂಡಿಕೇಟ್ ಬ್ಯಾಂಕ್ ವಲಯ ಕಛೇರಿಯ ಪ್ರಧಾನ ವ್ಯವಸ್ಥಾಪಕ ಬಾಸ್ಕರ್ ಹೆಗ್ಡೆ, ಸಿಂಡ್ ವಾಹನ ಮೇಳವನ್ನು ಪ್ರಾಯೋಗಿಕವಾಗಿ ಉಡುಪಿಯಲ್ಲಿ ಮಾಡಿದ್ದೆವು. ಸುಮಾರು 1800ರಿಂದ 2000 ಜನ ಸೇರಿದ್ದರು. ಸುಮಾರು 100 ಜನ ಕ್ಕೆ 5 ಕೋಟಿ ರೂ.ಸಾಲವನ್ನು ವiಂಜೂರಾತಿ ಮಾಡಲಾಗಿದೆ. ಇದೀಗ ಮಂಗಳೂರಿನಲ್ಲಿ ಇನ್ನು ಹೆಚ್ಚು ಅವಕಾಶ ಇದೆ ಎಂದರು.ಕಾರ್ಯಕ್ರಮದಲ್ಲಿ ಮಂಗಳೂರ ವಲಯ ಕಛೇರಿಯ ಪ್ರಧಾನ ವ್ಯವಸ್ಥಾಪಕ ಸಿ.ಎಮ್ ತಿಮ್ಮಯ್ಯ, ಮಂಗಳೂರು ವಲಯ ಕಛೇರಿಯ ಉಪಪ್ರಧಾನ ವ್ಯವಸ್ಥಾಪಕ ಪಿ.ಯನ್ ಶಿವಸ್ವಾಮಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.ಅ.27 ಮತ್ತು 28ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ವಾಹನ ಮೇಳ ನಡೆಯಲಿದೆ. ಮೇಳದಲ್ಲಿ ಪ್ರಮುಖ ವಾಹನ ಸಂಸ್ಥೆಗಳಾದ ಮಾರುತಿ ಸುಝುಕಿ, ಫೋರ್ಡ್, ಕೆಟಿಎಂ, ಟೊಯೋಟ, ಫೋಕ್ಸ್‍ವೇಗನ್, ಟಾಟಾ ಮೋಟಾರ್ಸ್, ಮಹೀಂದ್ರಾ, ರೆನಾಲ್ಟ್, ಹ್ಯುಂಡಾಯ್, ನೆಕ್ಸಾ, ಇಸುಸು, ಕವಸಕಿ ಮುಂತಾದ ಸಂಸ್ಥೆಗಳು ಭಾಗವಹಿಸುತ್ತಿವೆ. ಸೌಲಭ್ಯದಲ್ಲಿ ವೇತನದಾರರಿಗೆ ಬಡ್ಡಿದರದಲ್ಲಿ ರಿಯಾಯಿತಿಯ ಜೊತೆಗೆ ಆಕರ್ಷಕ ದರದಲ್ಲಿ ಸುಲಭ ಸಾಲ, ಜಾಮೀನು ಇಲ್ಲದೆ, ಪೂರ್ವಪಾವತಿ ದಂಡವಿಲ್ಲದೆ, ಅತಿ ಕಡಿಮೆ ಸಂಸ್ಕರಣಾ ಶುಲ್ಕದಲ್ಲಿ ಜೊತೆಗೆ ಯಾವುದೇ ಪ್ರವೇಶ ಶುಲ್ಕ ಇಲ್ಲದೆ ಸಾಲ ಒದಗಿಸುವ ಸೌಲಭ್ಯವನ್ನು ಒದಗಿಸಲಾಗಿದೆ. ಗ್ರಾಹಕರು ತಮ್ಮ ನೆಚ್ಚಿನ ವಾಹನಕ್ಕೆ ಕೇವಲ 15 ಶೇ. ಹಣವನ್ನು ಪಾವತಿಸಿ ಉಳಿದ ಹಣವನ್ನು 84 ಸಮಾನ ಮಾಸಿಕ ಕಂತುಗಳಲ್ಲಿ ಮರುಪಾವತಿಸುವ ಅವಕಾಶವನ್ನು ಪಡೆಯಬಹುದು. ಜೊತೆಗೆ ಅದೃಷ್ಟ ಚೀಟಿದಾರರಿಗೆ ಆಕರ್ಷಕ ಉಡುಗೊರೆಗಳು ಕೂಡ ಕಾದಿವೆ.

Related posts

Leave a Reply