Header Ads
Breaking News

ಸಿಎಂ ಗ್ರಾಮ ವಾಸ್ತವ್ಯದ ಬಗ್ಗೆ ಕೋಟಾ ಟೀಕೆ : ಐವನ್ ಡಿಸೋಜಾ ಪ್ರತಿಕ್ರಿಯೆ ಎನು?

ವಿಧಾನ ಪರಿಷತ್ ವಿಪಕ್ಷ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಸಿಎಂ ಅವರ ಗ್ರಾಮ ವಾಸ್ತವ್ಯವನ್ನು ಲಘುವಾಗಿ ಟೀಕಿಸಿದ್ದಾರೆ. ಆಡಳಿತದ ಅನುಭವ, ಯೋಚನೆ, ಯೋಜನೆ ಇರುವವರು ಈ ರೀತಿ ಟೀಕೆ ಮಾಡಲು ಸಾಧ್ಯವಿಲ್ಲ ಜನರ ಬಗ್ಗೆ ಕಾಳಜಿ ಮತ್ತು ಪರಿಕಲ್ಪನೆ ಇರುವವರು ಟೀಕೆ ಮಾಡುವುದು ಸರಿಯಲ್ಲ. ಬಿಜೆಪಿಯವರು ಜೈಲು ವಾಸ ಅನುಭವಿಸಿದವರು ಅವರಿಗೆ ಗ್ರಾಮ ವಾಸ್ತವ್ಯದ ಕಲ್ಪನೆ ಇರಲು ಸಾಧ್ಯವಿಲ್ಲ ಎಂದು ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಹೇಳಿದರು.

ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಕರ್ನಾಟಕ ರಾಜ್ಯದಲ್ಲಿ ನಮ್ಮ ಜಿಲ್ಲೆ ಕೂಡ ಬರಪೀಡಿತ ಪ್ರದೇಶ ಎಂದು ಘೋಷಣೆ ಅಗಿದೆ. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದೆಲ್ಲೆಡೆ ಪ್ರವಾಸ ಮಾಡಿದ್ದೀರಿ. ಪ್ರವಾಸ ಮಾಡಿದ ನಂತರ ನಿವೇನು ಮಾಡಿದ್ದೀರಿ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ 25 ಮಂದಿ ಬಿಜೆಪಿ ಸಂಸದರಿದ್ದಾರೆ ಅವರು ಒಬ್ಬರಾದರೂ ನಮ್ಮ ಜಿಲ್ಲೆಯಲ್ಲಿ ಬರಗಾಲವಿದೆ ಎಂದು ದೇಶದ ಸಂಸತ್ತಿನಲ್ಲಿ ಹೇಳಿದ್ದಾರಾ? ಬಿಜೆಪಿಯವರಿಗೆ ಮಾತನಾಡುವಂತಹ ಶಕ್ತಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.

Related posts

Leave a Reply

Your email address will not be published. Required fields are marked *