Header Ads
Header Ads
Breaking News

ಸಿಎಂ ರೈತರ ಬಗ್ಗೆ ಕೀಳು ಮಟ್ಟದ ಮಾತುಗಳನ್ನಾಡಿದ್ದಾರೆ, ರಾಜ್ಯದ ರೈತರ ಬಳಿ ಕ್ಷಮೆ ಕೇಳಬೇಕು: ರತ್ನಾಕರ ಹೆಗ್ಡೆ ಆಗ್ರಹ

ಮುಖ್ಯಮಂತ್ರಿ ರೈತರ ಬಗ್ಗೆ ಕೀಳು ಮಟ್ಟದ ಮಾತುಗಳನ್ನಾಡಿದ್ದಾರೆ ಈ ಬಗ್ಗೆ ಕೂಡಲೇ ರಾಜ್ಯದ ರೈತರ ಕ್ಷಮೆ ಕೇಳಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಆಗ್ರಹಿಸಿದ್ದಾರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದ ಒಬ್ಬ ಮುಖ್ಯಮಂತ್ರಿ ರೈತರ ಬಗ್ಗೆ ಹಾಗೂ ಮಹಿಳೆಯ ಬಗ್ಗೆ ಕೀಳು ಮಟ್ಟದ ಮಾತುಗಳನ್ನು ಆಡಬಾರದು. ತಾವು ಮಣ್ಣಿನ ಮಕ್ಕಳು ಎಂದು ಇಡೀ ದೇಶಕ್ಕೆ ಸಾರಿದವರು ರಾಜ್ಯದ ರೈತರ ಬಗ್ಗೆ ಕೀಳು ಭಾವನೆಯನ್ನು ಹೊಂದಿರುವುದು ದುರದೃಷ್ಟಕರ ಕಬ್ಬು ಬೆಳೆಗೆ ಬೆಂಬಲ ಬೆಲೆ ನೀಡಬೇಕು ಎಂದು ಪ್ರತಿಭಟಿಸಿದ ರೈತರ ವಿರುದ್ಧ ಡಕಾಯಿತರು ದರೋಡೆಕೋರರು ಎಂಬ ಮಾತುಗಳನ್ನು ಮುಖ್ಯಮಂತ್ರಿಗಳು ಆಡಿದ್ದರು ಈ ಬಗ್ಗೆ ಕೂಡಲೇ ಅವರು ಕ್ಷಮೆ ಕೇಳಬೇಕು. ಎಂದು ಆಗ್ರಹಿಸಿದರು.

Related posts

Leave a Reply