Header Ads
Header Ads
Header Ads
Breaking News

ಸಿಎಂ ವಾಚ್ ಹಗರಣದ ಬಗ್ಗೆ ಸಿಬಿಐ ತನಿಖೆ: ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ 

ಸಿಎಂ ಸಿದ್ದರಾಮಯ್ಯ ಅವರ ಹ್ಯೂ ಬ್ಲೋಟ್ ವಾಚ್ ಪ್ರಕರಣದ ಹಿಂದೆ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಪ್ರದಾನ ಮಂತ್ರಿಗಳಿಗೆ ಪತ್ರ ಬರೆದಿರುವುದಾಗಿ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿರುವ ಅನುಪಮಾ ಶೆಣೈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ, ಆರ್.ವಿ ದೇಶ್‌ಪಾಂಡೆ, ಪ್ರಮೋದ್ ಮದ್ವರಾಜ್, ಕಾಗೋಡು ತಿಮ್ಮಪ್ಪ, ರಮೇಶ್ ಕುಮಾರ್, ಮಹದೇವಪ್ಪ, ಟಿ.ಬಿ ಜಯಚಂದ್ರ, ರಜನೀಶ್ ಗೋಯಲ್, ಉಡುಪಿಯ ಹಿಂದಿನ ಜಿಲ್ಲಾಧಿಕಾರಿ ವೆಂಕಟೇಶ್, ಬಿ.ಆರ್ ಶೆಟ್ಟಿ ಹಾಗೂ ಡಾ.ಗಿರೀಶ್ ಚಂದ್ರವರ್ಮಾ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದೇನೆ. ನನಗೆ ಒಂದುವರೆ ತಿಂಗಳ ಬಳಿಕ ಪ್ರಧಾನಿ ಕಚೇರಿಯಿಂದ ಪತ್ರಕ್ಕೆ ಉತ್ತರ ಬಂದಿದ್ದು ಈ ಪತ್ರ ಪ್ರಧಾನಿ ಕಚೇರಿಯಿಂದ ಮತ್ತೊಂದು ಇಲಾಖೆಗೆ ವರ್ಗಾವಣೆ ಆಗಿದೆ ಎಂದ ಅನುಪಮಾ ಶೆಣೈ ಎರಡು ತಿಂಗಳು ಕಾದಬಳಿಕ ನ್ಯಾಯಾಲಯದಲ್ಲಿ ದಾವೆ ಹೂಡಿ ವಾಚ್ ಹಗರಣದ ಕುರಿತು ಹೋರಾಟ ನಡೆಸುತ್ತೇನೆ ಎಂದರು.
ವರದಿ: ಪಲ್ಲವಿ ಸಂತೋಷ್ ಉಡುಪಿ

Related posts

Leave a Reply