
ಮುಖ್ಯಮಂತ್ರಿಯ ವಿರುದ್ಧ ಮಂತ್ರಿಯೊಬ್ಬರು ದೂರು ನೀಡಿರುವುದು ದೇಶ ಇತಿಹಾಸದಲ್ಲಿ ಇದೇ ಮೊದಲು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಅವರು ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು. ಬಿಜೆಪಿಯ ಸೀನಿಯರ್ ಮೋಸ್ಟ್ ದೂರು ನೀಡಿದ್ದಾರೆ. ಪ್ರಮಾಣ ವಚನ ಭೋದಿಸಿದವರಿಗೆ ದೂರು ಕೊಟ್ಟಿದ್ದಾರೆ. ಸರ್ಕಾರದ ಆಡಳಿತದ ಬಗ್ಗೆ ದೂರಲ್ಲಿ ಹೇಳಲಾಗಿದೆ. ಸಂವಿಧಾನದ ನಾಯಕನಿಗೆ ಮಂತ್ರಿ ಪತ್ರ ಬರೆದು ಸಿಎಂ ಮೇಲೆ ವಿಶ್ವಾಸ ಇಲ್ಲ ಅಂತಾ ಹೇಳಿದ್ದಾರೆ. ಸರ್ಕಾರದ ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಮೂರು, ಆರು ತಿಂಗಳಿಗೆ ಅಧಿಕಾರಿಗಳ ಬದಲಾವಣೆ ಮಾಡಲಾಗುತ್ತಿದೆ. ಸಿಎಂ ಮೇಲೆ ಮಂತ್ರಿಗೆ ಈಗ ವಿಶ್ವಾಸವಿಲ್ಲ. ದೇಶದ ಇತಿಹಾಸದಲ್ಲಿ ಸಿಎಂ ವಿರುದ್ದ ಯಾರೂ ದೂರು ಕೊಟ್ಟಿರಲಿಲ್ಲ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಎಂ ವಿರುದ್ಧ ಮಂತ್ರಿ ದೂರು ಕೊಟ್ಟಿದ್ದಾರೆ. ಸದ್ಯದ ಆಡಳಿತ ಸರಿ ಇಲ್ಲ ಎಂದು ಬಿಂಬಿಸಿದ್ದಾರೆ. ಇವರು ಸರಿ ಇಲ್ಲ, ನನ್ನ ಆಡಳಿತ ಸರಿ ಇದೆ ಅಂದ್ರೆ ಅವರನ್ನು ಉಚ್ಚಾಟಿಸಲಿ ಅಥವಾ ಮಂತ್ರಿಗಳೇ ವಾಲಿಯಂಟರ್ ಆಗಿ ರಾಜೀನಾಮೆ ನೀಡಲಿ ಎಂದು ಡಿಕೆಶಿ ಸವಾಲು ಹಾಕಿದರು.