Header Ads
Header Ads
Header Ads
Breaking News

ಸಿಎಎ, ಎನ್‍ಸಿಆರ್ ವಿರುದ್ಧ ಮುಸ್ಲಿಂ ಜಮಾಅತ್ ಒಕ್ಕೂಟದ ವತಿಯಿಂದ ಪ್ರತಿಭಟನಾ ಸಭೆ

ಮುಸ್ಲಿಂ ಜಮಾಅತ್ ಒಕ್ಕೂಟದ ವತಿಯಿಂದ ಮಂಗಳೂರಿನ ಗ್ರಾಮಚಾವಡಿ ಜಂಕ್ಷನ್‍ನಲ್ಲಿ ಸಿಎಎ, ಎನ್‍ಸಿಆರ್ ವಿರುದ್ಧ ಪ್ರತಿಭಟನಾ ಸಭೆ ನಡೆಯಿತು. ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಯು.ಟಿ. ಖಾದರ್ ಅವರು ಯಾವುದೇ ದೇಶದ ಸರ್ಕಾರ ಕಾನೂನು ಜಾರಿಗೆ ತಂದಾಗ ಅದರ ಬಗ್ಗೆ ಜನರಿಗೆ ಮನವರಿಕೆ ಮಾಡುವುದು ಸಾಮಾನ್ಯ. ಆದರೆ ಕೇಂದ್ರ ಸರ್ಕಾರ ಪೌರತ್ವ ಕಾಯ್ದೆ ಬಗ್ಗೆ ಜನರಿಗೆ ಮನವರಿಕೆ ಮಾಡುವ ಬದಲು ಜಾಹಿರಾತುಗಳ ಮೂಲಕ, ಬಿಜೆಪಿ ಕಾರ್ಯಕರ್ತರನ್ನು ಮನೆಗಳಿಗೆ ಕಳುಹಿಸಿ ಇನ್ನಷ್ಟು ಗೊಂದಲ ಸೃಷ್ಟಿಸಲಾಗುತ್ತಿದೆ. ಸಂವಿಧಾನ ಉಳಿವಿನ ನಮ್ಮ ಹೋರಾಟದ ಎದುರು ಗೋಲಿಬಾರ್, ಲಾಠಿಚಾರ್ಜ್ ಎದುರು ಜುಜುಬಿ ಎಂದು ತಿಳಿಸಿದರು.

ಡಿವೈಎಫ್‍ಐ ಮಾಜಿ ರಾಜ್ಯಾಧ್ಯಕ್ಷ ಸುನಿಲ್ ಬಜಾಲ್ ಮಾತನಾಡಿ, ಪೌರತ್ವ ಕಾಯ್ದೆ ಮುಸಲ್ಮಾನರ ಪ್ರಶ್ನೆಯಲ್ಲ, ಇದು ದೇಶದ ಜನತೆಯ ಪ್ರಶ್ನೆಯಾಗಿರುವುದರಿಂದ ಜನ ಬೀದಿಗೆ ಇಳಿದಿದ್ದಾರೆ. ಇದು ಎರಡನೇ ಸ್ವಾತಂತ್ರ್ಯದ ಹೋರಾಟ. ವಿದ್ಯಾರ್ಥಿ ಸಮುದಾಯ, ಅರ್ಚಕರೂ ಬೀದಿಗಿಳಿದಿದೆ. ದಲಿತರು, ಆದಿವಾಸಿಗಳಲ್ಲಿ ದಾಖಲೆಗಳೇ ಇಲ್ಲದ ಕಾರಣ ಅಲ್ಪಸಂಖ್ಯಾತ ಮುಸ್ಲಿಮರಿಗಿಂತಲೂ ಬಹುಸಂಖ್ಯಾತ ಹಿಂದೂಗಳಿಗೂ ಅನ್ವಯವಾಗುತ್ತದೆ. ಆದರೂ ಮುಸಲ್ಮಾನರಿಗೆ ಮಾತ್ರ ಸಮಸ್ಯೆ ಎಂದು ಜನರ ದಾರಿತಪ್ಪಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಫರೀದ್ ನಗರ ರಿಫಾಯಿ ಜುಮಾ ಮಸೀದಿಯ ಮುದರ್ರಿಸ್ ಸಯ್ಯಿದ್ ಶರಫುದ್ದೀನ್ ತಂಙಳ್ ಅಲ್ ಹೈದ್ರೋಸಿ ಹರೇಕಳ, ಮುಸ್ಲಿಂ ಒಕ್ಕೂಟದ ಸಂಚಾಲಕ ಅಬ್ದುಲ್ ರಝಾಕ್, ಸಂಚಾಲಕ ಎಸ್.ಎಂ.ಆಸಿಫ್ ಇಕ್ಬಾಲ್ ಮಲಾರ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *