Header Ads
Breaking News

ಸಿಎಎ ಮತ್ತು ಎನ್‌ಸಿಆರ್ ಬಗ್ಗೆ ನಾಗರಿಕರಿಗೆ ಅರಿವು : ವಿಟ್ಲ ಶ್ರೀ ಪಂಚಲಿಂಗೇಶ್ವರ ದೇಗುಲದ ವಠಾರದಲ್ಲಿ ಆಯೋಜನೆ

ವಿಟ್ಲ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇಗುಲದ ವಠಾರದಲ್ಲಿ ಸಿಎಎ ಮತ್ತು ಎನ್‌ಸಿಆರ್ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸುವ ಮತ್ತು ಅದನ್ನು ಬೆಂಬಲಿಸುವ ಸಲುವಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಬೃಹತ್ ಜನಜಾಗೃತಿ ಸಮಾವೇಶ ನಡೆಯಿತು.

ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಮಾತನಾಡಿ ಸಿಎಎ, ಎನ್‌ಆರ್‌ಸಿ ಕಾಯ್ದೆ ಭಾರತದ ಮುಸ್ಲಿಂಮರಿಗೆ ಕಿಂಚಿತ್ತೂ ತೊಂದರೆ ನೀಡುವುದಿಲ್ಲ. ಆದರೆ ದೇಶದಲ್ಲಿ ಅಶಾಂತಿ, ಅರಾಜಕತೆ, ಪ್ರಕ್ಷುಬ್ಧ ಪರಿಸ್ಥಿತಿಯನ್ನು ಏರ್ಪಡಿಸುವ ದುರುದ್ದೇಶದಿಂದ ಕಾಂಗ್ರೆಸ್ ಹಾಗೂ ಅದರ ಬೆಂಬಲಿತ ಇತರ ಪಕ್ಷಗಳ ನಾಯಕರು ಇಲ್ಲಿನ ಮುಸ್ಲಿಂರಲ್ಲಿ ತಪ್ಪು ಸಂದೇಶವನ್ನು ಬಿತ್ತಿ ಯುವಕರನ್ನು ಕೆರಳಿಸುತ್ತಿದ್ದಾರೆ.

ಈ ವೇಳೆ ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ, ಬಜರಂಗಳ ಪ್ರಾಂತ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ, ಜಿಲ್ಲಾ ಸಂಚಾಲಕ ಶ್ರೀಧರ್ ತೆಂಕಿಲ, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *