Header Ads
Header Ads
Breaking News

“ಸಿಎಸ್‌ಐ ಲೊಂಬಾರ್ಡ್” ಆಸ್ಪತ್ರೆಯಲ್ಲಿ ಹೊಸ ಕೋರ್ಸ್ ಆರಂಭ

ಉಡುಪಿಯ ಅತ್ಯಂತ ಹೆಸರುವಾಸಿಯಾಗಿರುವ ಸಿ.ಎಸ್.ಐ ಲೋಂಬಾರ್ಡ್ ಸ್ಮಾರಕ ಆಸ್ಪತ್ರೆ ಅಥವಾ ಮಿಶನ್ ಆಸ್ಪತ್ರೆ ಇದೀಗ ಶೈಕ್ಷಣಿಕ ರಂಗದಲ್ಲಿ ಮುಂದುವರೆಯುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆಯನ್ನಿಟ್ಟಿದ್ದು ಪ್ಯಾರಾಮೆಡಿಕಲ್ ಕೋರ್ಸ್ ಗೆ ಚಾಲನೆ ನೀಡಿದೆ.ಉಡುಪಿಯ ಹೆಸರಾಂತ ಆಸ್ಪತ್ರೆಯಾಗಿರುವ ಮಿಶನ್ ಆಸ್ಪತ್ರೆ ಈಗಾಗಲೇ ಆರೋಗ್ಯ ಸೇವೆಗೆ ಮನೆ ಮಾತಾಗಿದೆ. ಆರೋಗ್ಯ ಸೇವೆಯ ಜೊತೆಗೆ ಶಿಕ್ಷಣದಲ್ಲಿ ಮುಂದುವರೆಯುವ ನಿಟ್ಟಿನಲ್ಲಿ ಮಹತ್ತರ ಯೋಜನೆಗಳನ್ನು ಹಾಕಿಕೊಂಡಿರುವ ಆಸ್ಪತ್ರೆಯ ಆಡಳಿತ ಮಂಡಲಿ ಪ್ಯಾರಾಮೆಡಿಕಲ್ ಕಾಲೆಜು ಆರಂಭಿಸಿದೆ.ಇಂದು ಇದನ್ನು ಕೆ.ಎಸ್.ಡಿಯ ಕೋಶಾಧಿಕಾರಿ ವಿನ್ಸೆಂಟ್ ಪಾಲನ್ ದೀಪ ಬೆಳಗಿಸುವ ಮೂಲಕ ಚಾಲನೆ ನಿಡಿದರು.

ಈ ಸಂದರ್ಬದಲ್ಲಿ ಮಾತನಾಡಿದ ಅವರು ಒಟ್ಟು ನಾಲ್ಕು ಆಸ್ಪತ್ರೆಗಳು ಡಯಾಸಿಸ್ ನಲ್ಲಿದ್ದು ಹಾಸನ, ಉಡುಪಿ, ಮೈಸೂರು ಚಾಮರಾಜನಗರದಲ್ಲಿದೆ. ಉಡುಪಿಯ ಈ ಆಸ್ಪತ್ರೆ ತುಂಬಾ ಬದಲಾವಣೆ ಆಗುತ್ತಿದೆ. ಹೊಸ ಜನರೇಶನ್ ಗೆ ತಕ್ಕಂತೆ ಬದಲಾವಣೆ ಅಗತ್ಯ ಇದೆ. ಈ ನಿಟ್ಟಿನಲ್ಲಿ ಆಡಳಿತ ಮಂಡಳಿಯು ಕೈಗೊಂಡಿರುವ ನಿರ್ಧಾರಗಳು ನಿಜಕ್ಕೂ ಶ್ಲಾಘನೀಯ ಎಂದರು. ಇನ್ನು ಆಸ್ಪತ್ರೆಯ ಆಡಳಿತ ನಿರ್ದೇಶಕ ಸುಶೀಲ್ ಜತ್ತನ್ನ ಮಾತನಾಡಿ ಆಸ್ಪತ್ರೆಯಲ್ಲಿ ಬದಲಾವಣೆ ಆಗುತ್ತಿದೆ. ಆದ್ರೆ ಒಬ್ಬನಿಂದ ಅದು ಸಾದ್ಯವಿಲ್ಲ. ಎಲ್ಲರ ಸಹಕಾರ ಇದೆ. ಮುಂದೆಯೂ ಆಸ್ಪತ್ರೆಯಿಂದ ಆರೋಗ್ಯ ಸೇವೆ ಮುಂದುವರೆಯಲಿದೆ. ನರ್ಸಿಂಗ್ ಕೋರ್ಸನ್ನು ಮಾತ್ರ ನಾವು ೫೦ ವರ್ಷಗಳಿಂದ ಇಲ್ಲಿ ಕಲಿಸುತ್ತಿದ್ದೇವೆ. ಆದ್ರೆ ಬೇರೆ ಕೋರ್ಸ್ ಗಳನ್ನು ನಾವು ಆರಂಭಿಸಿರಲಿಲ್ಲ. ಈ ನಿಟ್ಟಿನಲ್ಲಿ ಈಗ ಪ್ಯಾರಮೆಡಿಕಲ್ ಕೋರ್ಸ್ ಆರಂಭಿಸಿದ್ದು ಮುಂದೆ ಬಿ.ಎಸ್.ಸಿ ನರ್ಸಿಂಗ್, ಸೇರಿದಂತೆ ಇತರ ಕೋರ್ಸ್ ಗಳನ್ನು ಸಹ ಆರಂಬಿಸಲಿದ್ದೇವೆ ಅಂತ ಮಾಹಿತಿ ನೀಡಿದರು.ಸಮಾರಂಭದಲ್ಲಿ ಉಡುಪಿಯ ಏರಿಯಾದ ಚೇರ್ ಮೆನ್ ಸ್ಟೀವನ್ ಸರ್ವೋತ್ತಮ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಲೀಲಾ ಥಾಮಸ್, ಹೆಲೆನ್ ಮಥಾಯಸ್, ಡಾ.ರೆ ಐವಲಿನ್ ಅಮ್ಮಣ್ಣ, ಡಾ.ಎರ್. ಕಿಣಿ, ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply