Header Ads
Header Ads
Breaking News

ಸಿಐಎಲ್ ಫೆಸ್ಟ್-2019:ಲಯನ್ಸ್, ಲಯನೆಸ್, ಲಿಯೋ ಕ್ಲಬ್‌ನಿಂದ ಕಾರ್ಯಕ್ರಮ.

ಸೆಂಟರ್ ಫಾರ್ ಇಂಟರ್ ಗ್ರೆಟೆಡ್ ಲರ್ನಿಂಗ್ ಮತ್ತು ಲಯನ್ಸ್, ಲಯನೆಸ್, ಲಿಯೋ ಕ್ಲಬ್ ಮಂಗಳೂರು ವತಿಯಿಂದ ಸಿ.ಐ.ಯಲ್ ಫೆಸ್ಟ್ 2019 ನಗರದ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಕೇಲೋ ಇಂಡಿಯಾ ಮೆಡಲಿಸ್ಟ್ ಸ್ವಿಮ್ಮರ್ ಎಸ್.ಆರ್ ರಚನಾ ರಾವ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ಆಸರೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಆಶಾಜ್ಯೋತಿ ಇವರು ಸಿ.ಐ.ಯಲ್@10ಇದರ ಲೊಗೋ,ಮತ್ತು ಸಿ.ಐ.ಯಲ್ ಫೆಸ್ಟ್ 2019 ನ ಟ್ರೋಫಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ ಮಕ್ಕಳು ದೇಶದ ಭವಿಷ್ಯ , ಈ ದೇಶದ ಭವಿಷ್ಯದ ಮುಂದೆ ನಿಂತಿರುವುದು ಹೆಮ್ಮೆಯಾಗುತ್ತಿದೆ ಎಂದರು.ನಂತರ ಮಾತನಾಡಿದ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ವಿಜಯ ವಿಷ್ಣು ಮಯ್ಯ ಮಾತನಾಡಿ ನಾಯಕತ್ವ ಎನ್ನುವುದು ಬಬ್ಬರೇ ಬೆಳೆಯುವುದಲ್ಲ ಬದಲಾಗಿ ತನ್ನ ಜೊತೆ ಬೇರೆಯವರನ್ನು ಮುಂದೆ ನಡೆಸುವಂತಹ ಜವಾಬ್ದಾರಿ ಹಾಗೂ ಕೆಲಸ ಎಂದರು.ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಸಚಿತ ನಂದಗೋಪಾಲ್ ಇತರ ಗಣ್ಯರು ಉಪಸ್ಥಿತರಿದ್ದರು.

Related posts

Leave a Reply