Header Ads
Header Ads
Breaking News

ಸಿಐಎಸ್‌ಎಫ್‌ನಿಂದ ವನಮಹೋತ್ಸವ

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ವತಿಯಿಂದ 1,500 ಸಸಿಗಳನ್ನು ನೆಡುವ ಮೂಲಕ ವನ ಮಹೋತ್ಸವವನ್ನು ಆಚರಿಸಲಾಯಿತು.


ಮಂಗಳೂರು ವಿಮಾನ ನಿಲ್ದಾಣದ ಸಿಐಎಸ್‌ಎಫ್‌ನ ಡೆಪ್ಯೂಟಿ ಕಮಾಂಡೆಟ್ ಅಮಿತ್ ಕುಮಾರ್, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಿಐಎಸ್‌ಎಫ್ ಈ ವರ್ಷ ಸ್ವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದು ದೇಶದಲ್ಲೆಡೆ ಸಿಐಎಸ್‌ಎಫ್ ವನಮಹೋತ್ಸವ -2018ನ್ನು ಆಚರಿಸುತ್ತಿದೆ. ಮಂಗಳೂರು ವಿಮಾನ ನಿಲ್ದಾಣದ ಸಿಐಎಸ್‌ಎಫ್ ಯೂನಿಟ್‌ನಿಂದ ೭೫ ಸಿಐಎಸ್‌ಎಫ್ ಜವಾನರು ಈ ವನಮಹೋತ್ಸವದಲ್ಲಿ ಪಾಲ್ಗೊಂಡರು.
ಹಳೆ ವಿಮಾನ ನಿಲ್ದಾಣದ ಪರಿಸರದಲ್ಲಿ ರಸ್ತೆ ಬದಿಯಲ್ಲಿ ಸುಮಾರು 1,500 ಸಸಿಗಳನನು ನೆಡಲಾಯಿತು. ಈ ಸಂದರ್ಭ 1,೦೦೦ ಸಸಿಗಳನ್ನು ಪಂಡಿತ್ ಹೆಲ್ತ್ ರೆಸಾರ್ಟ್‌ನ ಮತ್ತು 5೦೦ ಸಸಿಗಳನ್ನು ಅರಣ್ಯ ಇಲಾಖೆಯವರು ಕೊಡುಗೆಯಾಗಿ ನೀಡಿದ್ದರು.

Related posts

Leave a Reply