
ಸಿಐಟಿಯು ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗೆದುರಾಗಿ ದೇಶದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲಿಸಿ ಹೊಸಂಗಡಿಯಲ್ಲಿ ಕಾರ್ಮಿಕರ ಸಂಗಮ ಕಾರ್ಯಕ್ರಮ ನಡೆಯಿತು. ಸಿಐಟಿಯು ಕಾಸರಗೋಡು ಜಿಲ್ಲಾಧ್ಯಕ್ಷರಾದ ಕಾಮ್ರೇಡ್ ಡಾ. ವಿಪಿಪಿ ಮುಸ್ತಾಫಾ ಉದ್ಘಾಟಿಸಿದ್ರು. ಬಳಿಕ ಮಾತನಾಡಿ ಕೇಂದ್ರವನ್ನು ಆಳುವ ಬಿಜೆಪಿ ಸರ್ಕಾರ ದೇಶದ ಕಾರ್ಮಿಕರು ಹಾಗೂ ರೈತರ ಹಕ್ಕುಗಳನ್ನು ಕಸಿಯುತ್ತಿದೆ ಎಂದು ಆರೋಪಿಸಿದ್ರು. ಈ ವೇಳೆ ಪ್ರಶಾಂತ್ ಕನಿಲ, ಎಐಕೆಸ್ ರಾಜ್ಯ ಸಮಿತಿ ಸದಸ್ಯರಾದ ಕಾಮ್ರೆಡ್ ಜಯಾನಂದ, ಸಿಪಿಐಎಂ ಮಂಜೇಶ್ವರ ಏರಿಯಾ ಸಮಿತಿ ಕಾರ್ಯದರ್ಶಿ ಕಾಮ್ರೆಡ್ ಕೆವಿ ಕುಂಞ ರಾಮನ್ ಮತ್ತಿತರರು ಉಪಸ್ಥಿತರಿದ್ದರು.