Header Ads
Breaking News

ಸಿಟಿ ಬಸ್ ಮಾಲಕರ ಸಂಘದಿಂದ ಚಲೋ ಕಾರ್ಡ್ ಯೋಜನೆ : ಅದೃಷ್ಟಶಾಲಿ ಮೂವರು ಪ್ರಯಣಿಕರಿಗೆ ಬಹುಮಾನ ವಿತರಣೆ

ಉಡುಪಿ ಸಿಟಿ ಬಸ್ ಮಾಲಕರ ಸಂಘದ ವತಿಯಿಂದ ನಗದು ರಹಿತ ಪ್ರಯಾಣಕ್ಕಾಗಿ ಚಲೋ ಕಾರ್ಡ್ ಆರಂಭಿಸಿದ್ದಾರೆ. ಇದನ್ನು ಉತ್ತೇಜನ ಮಾಡಲು ಲಕ್ಕಿ ಕೂಪನ್ ವ್ಯವಸ್ಥೆ ಮಾಡಿದ್ದು ಇದರ ವಿಜೇತರಿಗೆ ಇಂದು ಬಹುಮಾನ ವಿತರಿಸಲಾಯಿತು. ಸಪ್ಟೆಂಬರ್ ತಿಂಗಳಿನಲ್ಲಿ ಚಲೋ ಕಾರ್ಡ್ ಉಪಯೋಗಿಸಿ ಪ್ರಯಾಣಿಸಿದವರ ಪೈಕಿ 3 ಮಂದಿ ಅದೃಷ್ಟಶಾಲಿಗಳಾಗಿದ್ದಾರೆ. ಆ 3 ಮಂದಿ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ನಗರದ ಸಿಟಿ ಬಸ್ ಸ್ಟ್ಯಾಂಡ್ ಸಮೀಪ ಜರುಗಿತು.

ಬಳಿಕ ಕಾರ್ಯಕ್ರಮದ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಜಗದೀಶ್ ಅವರು ಸಿಟಿ ಬಸ್ ಮಾಲಕ್ರು ಒಂದು ಉತ್ತಮ ಕೆಲಸವನ್ನು ಮಾಡಿದ್ದಾರೆ. ಬಸ್ ಗಳ ಚಾಲಕರು ಮತ್ತು ಕಂಡಕ್ಟರ್ ರವರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು ನಿಮ್ಮ ಮುಖಾಂತರ ಸಾರ್ವಜನಿಕರಿಗೆ ಕರೋನಾದ ಅರಿವು ಮೂಡಲಿ ಎಂದು ಹೇಳಿದರು.

ಈ ಸಂದರ್ಭ ಶಾಸಕರಾದ ರಘುಪತಿ ಭಟ್, ಸಿಟಿ ಬಸ್ ಮಾಲಕರ ಸಂಘದ ಕೊಶಾಧಿಕಾರಿ ಚಂದನ್, ಪಧಾಧಿಕಾರಿ ಸಂದೀಪ್,ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *