Header Ads
Header Ads
Breaking News

ಸಿಟಿ ಸೆಂಟರ್‌ನ ಸಿನಿಪೊಲೀಸ್‌ನಲ್ಲಿ ಕಟಪಾಡಿ ಕಟ್ಟಪ್ಪ ಸಿನಿಮಾದ ಟೀಸರ್ ಬಿಡುಗಡೆ

ತುಳುಚಿತ್ರರಂಗದ ಬಹು ನಿರೀಕ್ಷಿತ ಸಿನೆಮವಾದ “ಕಟಪಾಡಿ ಕಟ್ಟಪ್ಪ” ಸಿನೆಮಾದ ಟೀಸರ್ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಸಿಟಿ ಸೆಂಟರ್‌ನ ಸಿನಿಪೊಲಿಸ್ ಚಿತ್ರ ಮಂದಿರದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಕರಾವಳಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಗಣೇಶ್ ರಾವ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಈ ಚಿತ್ರದ ಕೇವಲ ಟೀಸರ್ ವೀಕ್ಷಿಸಲು ಇಷ್ಟು ಮಂದಿ ಸೇರಿದ್ದಾರೆಂದಾದರೆ ಈ ಸಿನೆಮಾ ಗೆದ್ದಂತೆ.ಯಾವ ಕೆಲಸ ಒಳ್ಳೆಯ ಮನಸ್ಸಿನಿಂದ ಒಳ್ಳೆಯ ಉದ್ದೇಶದಿಂದ ಮಾಡುತ್ತೆವೆಯೋ ಅದ್ದಕ್ಕೆ ಕಂಡಿತವಾಗಿಯೂ ದೇವರ ಆಶಿರ್ವಾದ ಸಿಗುತ್ತದೆ ಎಂದು ಹೇಳಿದರು.

ಬಳಿಕ ತುಳುಚಿತ್ರ ನಿರ್ದೇಶಕ, ಹಿರಿಯ ನಟ ದೇವದಾಸ್ ಕಾಪಿಕಾಡ್ ಮಾತನಾಡಿ “ಕಟಪಾಡಿ ಕಟ್ಟಪ್ಪ” ತುಳುಚಿತ್ರರಂಗದ ಬಲು ನಿರೀಕ್ಷಿಸತ ಸಿನೆಮಾ. ಕಟಪಾಡಿ ಕಟ್ಟಪ್ಪ ಸಿನೆಮಾ ಓ ದೆವೆರೇ…ತುಳುಚಿತ್ರ ರಂಗದವರನೆಲ್ಲ ಒಂದು ಮಾಡಿ ಕಟ್ಟಪ್ಪ ಎನ್ನುವ ರೀತಿಯಲ್ಲಿ ಎಲ್ಲರನ್ನು ಒಂದು ಮಾಡಿದೆ ಎಂದರು.ಬಳಿಕ ಸಿನೆಮಾದ ಟೀಸರ್‌ನ ಪ್ರದರ್ಶನ ಮಾಡಲಾಯಿತು.ಈ ಸಂದರ್ಭ ಸಿನೆಮಾದ ನಿರ್ಮಾಪಕರಾದ ರಾಜೇಶ್ ಬ್ರಹ್ಮಾವರ್, ನಿರ್ದೇಶಕರಾದ ಜೆ.ಪಿ.ತುಮಿನಾಡ್, ಚಲನಚಿತ್ರ ನಿರ್ಮಾಪಕರಾದ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್, ತುಳು ಚಿತ್ರ ನಟರಾದ ಅರ್ಜುನ್ ಕಾಪಿಕಾಡ್,ಅನೂಪ್ ಸಾಗರ್,  ಪ್ರಕಾಶ್ ಪಾಂಡೇಶ್ವರ್, ಶರ್ಮಿಳಾ ಕಾಪಿಕಾಡ್ ಸೇರಿದಂತೆ ತುಳು ಚಿತ್ರರಂಗದ ಹಲವರು ಉಪಸ್ಥಿತರಿದ್ದರು.

Related posts

Leave a Reply