Header Ads
Header Ads
Breaking News

ಸಿಟಿ ಸ್ಕ್ವೇರ್‌ಗೆ ಶಿಲಾನ್ಯಾಸ ಕಾರ್ಯಕ್ರಮ:ರೋಹನ್ ಕಾರ್ಪೊರೇಷನ್‌ನಿಂದ ನಿರ್ಮಾಣಗೊಳ್ಳಲಿರುವ ವಾಣಿಜ್ಯ ಸಂಕೀರ್ಣ

ರೋಹನ್ ಕಾರ್ಪೊರೇಷನ್, ಪ್ರಾಪರ್ಟಿ ಇನ್ಫ್ರಾಟೆಕ್ ಇಂಡಿಯ ಪ್ರೈವೇಟ್ ಲಿಮಿಟೆಡ್‌ನ ವತಿಯಿಂದ ನಗರದ ಲಾಲ್‌ಬಾಗ್‌ನಲ್ಲಿ ನಿರ್ಮಾಣಗೊಳ್ಳಲಿರುವ ಸಿಟಿ ಸ್ಕ್ವೇರ್ ವಾಣಿಜ್ಯ ಸಂಕೀರ್ಣದ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮವನ್ನು ಬಿಜೈ ಚರ್ಚ್ ನ ಧರ್ಮ ಗುರುಗಳಾದ ವಿಲ್ಸನ್ ವಿಟಸ್ ಡಿಸೋಜ ಹಾಗೂ ಮಂಜನಾಡಿ ಅಹಮದ್ ಮುಸ್ಲಿಯಾರ್ ಅವರು ಆಶೀರ್ವಚನ ಮಾಡಿ ಬಳಿಕ ರೋಹನ್ ಮೋಂತೆರೋ ಅವರು ಕಟ್ಟಡದ ಶಿಲಾನ್ಯಾಸ ವನ್ನು ನೆರವೇರಿಸಿದರು.ಬಳಿಕ ಸಭಾ ಕಾರ್ಯಕ್ರಮವನ್ನು ವಿಲ್ಸನ್ ವಿಟಸ್ ಡಿಸೋಜ ಹಾಗೂ ಇತರ ಗಣ್ಯರ ಉಪಸ್ಥಿತಿಯಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಆಡಳಿತ ನಿರ್ದೇಶಕ ರೋಹನ್ ಮೋಂತೆರೋ ಮಾತನಾಡಿ ವ್ಯಾಪಾರ ಎಂಬುದು ಒಂದು ಸೇವೆ ಈಶ ಸೇವೆ ಮಾಡುವಾಗ ಎಲ್ಲರಿಗೂ ಒಳ್ಳೆಯದಾಗುತ್ತೆ ಹಾಗೂ ಉತ್ತಮವಾದ ಸೇವೆಯನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದರು.ಬಳಿಕ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಎಲ್ಲರಿಗೂ ಶುಭ ಹಾರೈಸಿದರು,ಎಸ್.ಸಿ.ಡಿ.ಸಿ.ಸಿ ಬ್ಯಾಂಕ್‌ನ ಅಧ್ಯಕ್ಷ ರಾದ ಎಮ್.ಎನ್. ರಾಜೇಂದ್ರ ಕುಮಾರ್ ಅವರು ಮಾತನಾಡಿ, ರಿಯಲ್ ಎಸ್ಟೇಟ್ ಉದ್ಯಮ ಸುಲಭದ ಉದ್ಯಮವಲ್ಲ ನೋಟು ಬ್ಯಾನ್ ಆದ ಮೇಲೆ ಮೊದಲ ಬಾರಿಗೆ ಇವರು ಈ ಕಾರ್ಯವನ್ನು ಮಾಡುತ್ತಿದ್ದಾರೆ ಎಂದ ಅವರು ಸಿಟಿ ಸ್ಕ್ವೇರ್‌ಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಿಟಿ ಸ್ಕ್ವೇರ್‌ನ ಮಾಹಿತಿ ಪತ್ರವನ್ನು ಗಣ್ಯರು ಬಿಡುಗಡೆಗೊಳಿಸಿದರು.

ಈ ಸಂದರ್ಭ ಕಾರ್ಯಕ್ರಮದಲ್ಲಿ ಮೇಯರ್ ಭಾಸ್ಕರ್ ಕೆ, ಮನಪಾ ಮುಖ್ಯ ಸಚೇತಕ ಶಶಿಧರ್ ಹೆಗಡೆ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಮೂಡಾ ಅಧ್ಯಕ್ಷ ಕೆ. ಸುರೇಶ್ ಬಳ್ಳಾಲ್, ಕ್ರೆಡಾಯ್ ಅಧ್ಯಕ್ಷ ಡಿ.ಬಿ.ಮೆಹ್ತಾ, ಕಟ್ಟಡದ ಮಾಲಕ ಅಬ್ದುಲ್ ಅಝೀಝ್, ಅವರ ಪತ್ನಿ ನೂರ್ ಜಹಾನ್, ಮನಪಾ ಸದಸ್ಯರಾದ ಜಯಂತಿ ಆಚಾರ್ಯ, ನವೀನ್ ಡಿಸೋಜ, ಸಬಿತಾ ಮಿಸ್ಕಿತ್, ಕಟ್ಟಡದ ವಿನ್ಯಾಸಕಾರ ಪೀಟರ್ ಪಾವ್ಲ್, ಹರಿಕೃಷ್ಣ ಬಂಟ್ವಾಳ್, ಕೆ.ಸಿ.ನಾಯ್ಕ್, ಅಡ್ವೋಕೇಟ್ ಅಬ್ದುಲ್ ಅಝೀಝ್, ಜಿಲ್ಲಾ ಮಾಜಿ ರಿಜಿಸ್ಟ್ರಾರ್ ಹಕ್, ವಿಶ್ವಾಸ್ ಬಾವ ಬಿಲ್ಡರ್ಸ್ ನ ಅಬ್ದುಲ್ ರವೂಫ್ ಪುತ್ತಿಗೆ, ಹಾಜಿ ಎಸ್.ಎಂ. ರಶೀದ್, ಮನ್ಸೂರ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply