Header Ads
Header Ads
Breaking News

ಸಿಡಿಮದ್ದು ಸಿಡಿದು ಯುವಕ ದಾರುಣವಾಗಿ ಮೃತ್ಯು : ಸೀತಾ ನದಿಯಲ್ಲಿ ಮೀನು ಹಿಡಿಯುವ ಸಂದರ್ಭ ಸಿಡಿದ ಸಿಡಿಮದ್ದು

ಸಿಡಿಮದ್ದು ಸಿಡಿದು ಯುವಕನೊಬ್ಬ ದಾರುಣವಾಗಿ ಮೃತಪಟ್ಟಿದ್ದಾನೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕುರ್ಪಾಡಿಯಲ್ಲಿ ಈ ಘಟನೆ ನಡೆದಿದೆ. ಕಳ್ತೂರು ನಿವಾಸಿ ಶ್ರೇಯಸ್ ಸೇರಿಗಾರ್ ಮೃತಪಟ್ಟ ಯುವಕ. ಈತ ಸದಾ ಪೂಜಾರಿ,ಯೋಗೇಶ್ ಪೂಜಾರಿ ಸೇರಿದಂತೆ ನಾಲ್ಕು ಮಂದಿ ಸ್ನೇಹಿತರೊಂದಿಗೆ ಇಲ್ಲಿನ ಸೀತಾನದಿಯಲ್ಲಿ ಮೀನುಹಿಡಿಯಲು ಹೋಗಿದ್ದ ವೇಳೆ ಶ್ರೇಯಸ್ ಮೀನು ಹಿಡಿಯುವ ಸಂದರ್ಭ ಸಿಡಿಮದ್ದು ಸಿಡಿದು ಮೃತಪಟ್ಟಿದ್ದಾನೆ. ಸಿಡಿಮದ್ದು ಎಸೆದ ಬಳಿಕ ಶ್ರೇಯಸ್ ಮೀನು ಹಿಡಿಯಲು ನದಿಗೆ ಹಾರಿದ್ದಾನೆ. ದುರಾದೃಷ್ಟವಶಾತ್ ಹಾರಿದ ಸಮಯದಲ್ಲೇ ಸಿಡಿಮದ್ದು ಸ್ಪೋಟಗೊಂಡಿದೆ. ಈ ಸ್ಪೋಟದ ಪರಿಣಾಮ ಶ್ರೇಯಸ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related posts

Leave a Reply

Your email address will not be published. Required fields are marked *