Header Ads
Header Ads
Header Ads
Breaking News

ಮಂಜೇಶ್ವರದ ಗೇರುಕಟ್ಟೆಯಲ್ಲಿ ಸಿಡಿಲು ಬಡಿದು ಮನೆಗೆ ಹಾನಿ

ಮಂಜೇಶ್ವರ : ಮರಕ್ಕೆ ಬಡಿದ ಸಿಡಿಲು ಮನೆಗೆ ತಾಗಿ ಮನೆ ಸಂಪೂರ್ಣವಾಗಿ ಹಾನಿಗೊಂಡಿದ್ದು, ಪಿಠೋಪಕರಣಗಳು ಹಾಗು ಇತರ ಸಾಮಾಗ್ರಿಗಳು ನಾಶಗೊಂಡಿದೆ. ಗೇರು ಕಟ್ಟೆ ಪಂಚಾಯತ್ ನೀಡಿದ ಸ್ಥಳದಲ್ಲಿ ಕಟ್ಟಲಾದ ಆಮಿನಾ ಎಂಬವರ ಮನೆಗೆ ಸಿಡಿಲು ಬಡಿದಿದೆ. ವಾಸದ ಮನೆಯ ವಿದ್ಯುತ್ ತಂತಿ ಸಂಪೂರ್ಣ ಸುಟ್ಟುಹೋಗಿದೆ. ಮನೆಯ ಚಾವಣಿಯ 30 ತಗಡು ಶೀಟ್‌ಗಳು ಪುಡಿಪುಡಿಯಾಗಿವೆ. ಮನೆಯ ಗೋಡೆ ಹಾಗೂ ಗೃಹಬಳಕೆ ವಸ್ತುಗಳಿಗೆ ಹಾನಿಯಾಗಿದೆ. ಸುಮಾರು ಒಂದು ಲಕ್ಷ ರೂಪಾಯಿ ನಷ್ಟ ಅಂದಾಜಿಸಲಾಗಿದೆ. ಮನೆಯಲ್ಲಿದ್ದ ಆಮಿನಾ, ಜವುರಾ, ಮಿಸ್ಬಾ, ಮಿಸಾಬ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.. ಸ್ಥಳೀಯ ಪಂ. ಸದಸ್ಯ ಮೂಸಾ ಅವರು ಹಾನಿಗೊಂಡ ಮನೆಗೆ ಭೇಟಿ ನೀಡಿ ಮೇಲಾಧಿಕಾರಿಗಳಿಗೆ ಸಹಾಯಕ್ಕಾಗಿ ಮನವಿಯನ್ನು ಸಲ್ಲಿಸುವ ಭರವಸೆ ನೀಡಿದರು.

 

Related posts

Leave a Reply

Your email address will not be published. Required fields are marked *