Header Ads
Breaking News

ಸಿಡಿಲು ಬಡಿದು ಮೂರು ನವಿಲುಗಳು ಮೃತ್ಯು

ಮೂಡುಬಿದಿರೆ: ಮೂಡುಕೊಣಾಜೆ ಗ್ರಾಮದ ಏರೋಡಿಬೆಟ್ಟು ಎಣ್ಮಜೆ ಎಂಬಲ್ಲಿ ಮರಕ್ಕೆ ಸಿಡಿಲು ಬಡಿದು ಮರದಲ್ಲಿದ್ದ ಮೂರು ನವಿಲುಗಳು ದಾರುಣವಾಗಿ ಸಾವನಪ್ಪಿದ್ದರೆ ಒಂದು ನವಿಲು ಗಾಯಗೊಂಡು ಪರಾರಿಯಾಗಿದೆ. ರಾತ್ರಿ ಸುಮಾರು 10 ಗಂಟೆಗೆ ಸೀತು ಎಂಬವರ ಮನೆಯ ಬಾವಿಗೆ ಮತ್ತು ಹತ್ತಿರದ ಮರಕ್ಕೆ ಏಕಕಾಲದಲ್ಲಿ ಸಿಡಿಲು ಬಡಿಯಿತ್ತೆನ್ನಲಾಗಿದೆ. ಮರದಲ್ಲಿ ನಾಲ್ಕು ನವಿಲುಗಳಿದ್ದು ಸಿಡಿಲ ಹೊಡೆತಕ್ಕೆ ಒಂದು ನವಿಲು ಸಣ್ಣಪುಟ್ಟ ಗಾಯಗೊಂಡು ಪರಾರಿಯಾಗಿತ್ತು. ಉಳಿದ ಮೂರು ನವಿಲುಗಳ ಪೈಕಿ ಒಂದು ಹೆಣ್ಣು ಮತ್ತು ಎರಡು ಗಂಡು ನವಿಲುಗಳು ನೆಲಕ್ಕೆ ಬಿದ್ದು ಸಾವನಪ್ಪಿದ್ದು ಮೈಮೇಲೆ ಸುಟ್ಟ ಗಾಯಗಳಿವೆ. ಶಿರ್ತಾಡಿ ಪಶು ವೈದ್ಯಾಧಿಕಾರಿ ಮಲ್ಲಿಕಾರ್ಜುನ ಎಲಿಗೆ ಪೋಸ್ಟ್ ಮಾರ್ಟಮ್ ನಡೆಸಿದರು. ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಮಂಜುನಾಥ್ ಗಾಣಿಗ ಮತ್ತು ಸಿಬಂದಿಗಳ ಉಪಸ್ಥಿತಿಯಲ್ಲಿ ಸರ್ಕಾರಿ ಗೌರವದೊಂದಿಗೆ ಮೂಡುಕೊಣಾಜೆಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

Related posts

Leave a Reply

Your email address will not be published. Required fields are marked *