Header Ads
Breaking News

ಸಿಡಿ ಲೇಡಿ ಹೈಕೋರ್ಟ್ ನ್ಯಾಯಮೂರ್ತಿಗೆ ಪತ್ರ ಬರೆದ ವಿಚಾರ : ಪ್ರತಿಕ್ರಿಯಿಸಲು ನಿರಾಕರಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ಸಿಡಿ ಲೇಡಿ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಮಂಗಳೂರಿಗೆ ಭೇಟಿ ನೀಡಿದ ವೇಳೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಬೊಮ್ಮಾಯಿ ಈ ಬಗ್ಗೆ ಯಾವುದೇ ಕಾಮೆಂಟ್ಸ್ ಇಲ್ಲ, ನೋ ಕಾಮೆಂಟ್ಸ್. ಎಸ್ ಐಟಿ ಡಿವೈಎಸ್ಪಿಯಿಂದ ಮನೆಯವರಿಗೆ ಒತ್ತಡ ಆರೋಪ ಇದೆ. ಯಾರೂ ಏನೇ ಹೇಳಿದರೂ ತನಿಖೆಯಿಂದ ಸತ್ಯಾಂಶ ಹೊರಬರುತ್ತದೆ. ಪರ-ವಿರೋಧಿ ಹೇಳಿಕೆಗಳು,ಹೊಸ ಹೊಸ ತಿರುವುಗಳು ಸಹಜ. ಆದರೆ ನಮ್ಮ ಎಸ್ ಐಟಿ ಟೀಂ ಸರಿಯಾದ ಮಾರ್ಗದಲ್ಲಿ ಕೆಲಸ ಮಾಡುತ್ತದೆ. ಮ್ಯಾಜಿಸ್ಟ್ರೇಟ್ ಎದುರು ಅನುಮತಿ ಸಿಕ್ಕ ಬಗ್ಗೆ ಗೊತ್ತಿಲ್ಲ, ಎಲ್ಲವೂ ಕಾನೂನು ಪ್ರಕಾರ ನಡೆಯುತ್ತದೆ ಎಂದರು.

Related posts

Leave a Reply

Your email address will not be published. Required fields are marked *