Header Ads
Header Ads
Breaking News

ಸಿದ್ದಕಟ್ಟೆ ಶಾಲೆಯ ವಿದ್ಯಾರ್ಥಿಗಳಿಂದ ಜಲಮರುಪೂರಣ : 204 ಮಕ್ಕಳಿಂದ ತಮ್ಮ ತಮ್ಮ ಮನೆಗಳಲ್ಲಿ ನೀರು ಇಂಗಿಸುವ ಕಾರ್ಯ

ಬಂಟ್ವಾಳ: ಮಳೆ ಬಂದಾಗ ನೀರನ್ನು ಇಂಗಿಸಿ ಜಲಮರು ಪೂರಣ ಮಾಡಿಕೊಳ್ಳಬೇಕು ಎನ್ನುವ ಮಾಹಿತಿ ಕಾರ್ಯಗಾರಗಳು ಅಲ್ಲಲ್ಲಿ ನಡೆಯುತ್ತಿರುತ್ತವೆ. ಆದರೆ ಇದನ್ನು ಅನುಷ್ಠಾನಗೊಳಿಸುವವರ ಸಂಖ್ಯೆ ಬಲು ವಿರಳ. ಬೇಸಿಗೆಯಲ್ಲಿ ಬರ ಪರಿಸ್ಥಿತಿ ಎದುರಾದಾಗ ಮಳೆಕೊಯ್ಲು ಮಾಡಿಕೊಳ್ಳಬೇಕು ಎಂದು ಕೊಂಡವರೂ ಮಳೆಗಾಲ ಬಂದಾಗ ಮರೆತು ಬಿಡುವುದೇ ಹೆಚ್ಚು. ಆದರೆ ಸಿದ್ದಕಟ್ಟೆ ಸರಕಾರಿ ಪ್ರೌಢಶಾಲೆಯ 204 ಮಂದಿ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಲ್ಲಿ ಮಳೆ ನೀರಿಂಗಿಸುವ ಗುಂಡಿ ಮಾಡಿ ಮಾದರಿಯಾಗಿದ್ದಾರೆ.ಸದಾ ಒಂದಲ್ಲೊಂದು ಚಟುವಟಿಕೆಯ ಮೂಲಕ ಗಮನ ಸೆಳೆಯುವ ಸಿದ್ದಕಟ್ಟೆ ಸರಕಾರಿ ಪ್ರೌಢಶಾಲೆ ಉಪಪ್ರಾಂಶುಪಾಲ ರಮಾನಂದ ನೂಜಿಪ್ಪಾಡಿಯವರು ಮಳೆ ನೀರಿಂಗಿಸುವಿಕೆಯ ಮಹತ್ವದ ಬಗ್ಗೆ ಮಳೆಗಾಲ ಆರಂಭದ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ತಿಳಿಸಿದ್ದರು. ಇದರ ಪ್ರೇರಣೆಯಿಂದ ಶಾಲೆಯ 204 ಮಂದಿ ಮಕ್ಕಳು ತಮ್ಮ ಮನೆಯ ಆವರಣ, ತೋಟ, ಗುಡ್ಡಗಳಲ್ಲಿ ನೀರಿಂಗಿಸುವ ಹೊಂಡಗಳನ್ನು ನಿರ್ಮಿಸಿದ್ದಾರೆ. ಅಲ್ಲದೆ ಶಾಲೆಯ 10 ಮಂದಿ ಶಿಕ್ಷಕರು ಕೂಡ ತಮ್ಮ ಮನೆಗಳಲ್ಲಿ ಇಂಗು ಗುಂಡಿ ನಿರ್ಮಿಸಿ ಜಲಮರುಪೂರಣ ವ್ಯವಸ್ಥೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದ್ದಾರೆ. ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಪಾಲಕರು ನೆರವಾಗಿದ್ದಾರೆ.

Related posts

Leave a Reply

Your email address will not be published. Required fields are marked *