Header Ads
Header Ads
Breaking News

ಸಿದ್ದರಾಮಯ್ಯಗೆ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸೇರಿದಂತೆ ಯಾರೂ ಕಾಣಿಸೋದಿಲ್ಲ: ಕೋಟ ಶ್ರೀನಿವಾಸ ಪೂಜಾರಿ

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕಾರ್ಯವೈಖರಿ, ಸಾಧನೆ, ಭ್ರಷ್ಟಾಚಾರ ಮುಕ್ತ ಆಡಳಿತ, ಜನರಿಗೆ ನೀಡಿದ ಕೊಡುಗೆ. ಶಿವಮೊಗ್ಗ ಲೋಕಸಭಾ ಕೇತ್ರದ ಉಪಚುನಾವಣೆಯಲ್ಲಿ ಕೇಂದ್ರದ ಸಾಧನೆ ಇಟ್ಟುಕೊಂಡು ಮತ ಯಾಚಿಸಲಾಗುವುದು. ಬಿ. ವೈ. ರಾಘವೇಂದ್ರ ಅತಿ ಹೆಚ್ಚು ಮತ ಗಳಿಸಿ ವಿಜಯಶಾಲಿ ಆಗಲಿದ್ದಾರೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಶಿವಮೊಗ್ಗ ಲೋಕಸಭಾ ಉಪಚುನಾವಣೆಯ ಹಿನ್ನಲೆಯಲ್ಲಿ ಬೈಂದೂರು ಬಿಜೆಪಿ ಕಛೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಘವೇಂದ್ರ ಹಿಂದೆ ಐದು ವರ್ಷ ಇದೇ ಕ್ಷೇತ್ರದ ಸಂಸದರಾಗಿದ್ದರು.

ಆಗ ಬೈಂದೂರು ಕ್ಷೇತ್ರದಲ್ಲಿ ಮೀನುಗಾರಿಕಾ ಬಂದರು, ಜೆಟ್ಟಿ, ರಸ್ತೆಗಳಿಗೆ ದೊಡ್ಡ ಮೊತ್ತದ ಅನುದಾನ ತಂದಿದ್ದರು. ಅವರ ಬಗ್ಗೆ ಮತದಾರರಲ್ಲಿ ಉತ್ತಮ ಅಭಿಪ್ರಾಯವಿದೆ’ ಎಂದರು.ಸದಾ ನಿದ್ದೆಯಲ್ಲಿಯೇ ಮುಳುಗಿರುವ ಮಾಜಿ ಸಿಎಂ ಸಿದ್ದರಾಮಯ್ಯಗೆ ಹಾಲಾಡಿ ಶ್ರೀನಿವಾ ಶೆಟ್ಟಿ ಸೇರಿದಂತೆ ಯಾರೂ ಕಾಣಿಸೋದೆಯಿಲ್ಲ. ಅದು ಸಿದ್ದರಾಮಯ್ಯರ ತಪ್ಪು ಹೊರತು ಹಾಲಾಡಿಯವರದ್ದಲ್ಲ. ಈ ಸಿದ್ದರಾಮಯ್ಯ ನಿದ್ದೆಯಿಂದ ಎದ್ದಿದ್ದರೂ ಕೂಡ ಕಾಲ ಮಿಂಚಿದೆ ಎಂದು ವಿಧಾನ ಪರಿಷತ್‌ನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾಜಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಬಂಟ್ವಾಳ ಶಾಸಕ ರಾಜೇಶ ನಾಯ್ಕ್, ಮುಖಂಡ ಸದಾನಂದ ಉಪ್ಪಿನಕುದ್ರು, ಸಂಧ್ಯಾ ರಮೇಶ್, ರಾಮಚಂದ್ರ ಬೈಕಂಪಾಡಿ, ನವೀನ ಶೆಟ್ಟಿ ಕುತ್ಯಾರು, ದೇವದಾಸ ಶೆಟ್ಟಿ, ದೀಪಕ್ ಕುಮಾರ ಶೆಟ್ಟಿ, ಸುರೇಶ ಬಟ್ವಾಡಿ, ಪ್ರಿಯದರ್ಶಿನಿ ಬೆಸ್ಕೂರ್, ಸದಾಶಿವ ಪಡುವರಿ ಇದ್ದರು

Related posts

Leave a Reply