Header Ads
Header Ads
Breaking News

ಸಿದ್ದರಾಮಯ್ಯ ಆಡಳಿತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತ: ಎಸ್.ಸಂಶುದ್ದೀನ್ ಹೇಳಿಕೆ

ಸುಳ್ಯ: ಕಳೆದ ೫ ವರ್ಷದಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗೆ ವಿಶೇಷ ಒತ್ತುನೀಡಿದ್ದು, ಇತಿಹಾಸದಲ್ಲಿಯೇ ದಾಖಲೆ ಪ್ರಮಾಣದ ಹಣವನ್ನು ಅಲ್ಪಸಂಖ್ಯಾತರ ಯೋಜನೆಗೆ ನೀಡಿದ್ದಾರೆ. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದೆ ಎಂದು ರಾಜ್ಯ ವಕ್ಫ್ ಪರಿಷತ್ ಸದಸ್ಯ ಎಸ್.ಸಂಶುದ್ದೀನ್ ಹೇಳಿದ್ದಾರೆ.

ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಹಾಗೂ ಪ್ರಸ್ತುತ ಆಡಳಿತ ನಡೆಸುವ ರಾಜ್ಯಗಳಲ್ಲಿ ಅಲ್ಪಸಂಖ್ಯಾತರು ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯದಡಿಯಲ್ಲಿ ದೃಢತೆಯಿಂದ ಮುನ್ನಡೆಯುತ್ತಿದ್ದು, ರಾಜ್ಯದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತರಾಗಿದ್ದಾರೆ.
ಕ್ರೈಸ್ತ ಸಮುದಾಯಕ್ಕೂ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ತಂದಿದ್ದು, ಸುಳ್ಯ ತಾಲೂಕಿಗೂ ಹಲವು ಕೋಟಿ ಅನುದಾನ ಬಂದಿದೆ ಎಂದು ಜೂಲಿಯಾನ ಕ್ರಾಸ್ತಾ ಹೇಳಿದರು.
ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಿ.ಕೆ.ಹಮೀದ್, ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್ ಕೊಕ್ಕೋ, ಮಹಮ್ಮದ್ ಕುಂಞಿ ಗೂನಡ್ಕ, ಅಬ್ದುಲ್ ಮಜೀದ್ ನಡುವಡ್ಕ, ಮೊದೀನ್ ಮಾಸ್ಟರ್, ಇಸ್ಮಾಯಿಲ್ ಪಡ್ಪಿನಂಗಡಿ, ಶಾಫಿ ಕುತ್ತಮೊಟ್ಟೆ, ಎಸ್.ಕೆ.ಹನೀಫ, ಜೂಲಿಯಾನ ಕ್ರಾಸ್ತಾ, ಮಹಮ್ಮದ್ ಕುಂಞಿ ಗೂನಡ್ಕ, ಬಾಪೂ ಸಾಹೇಬ್, ಇಸಾಕ್ ಸಾಹೇಬ್ ಪಾಜಪಳ್ಳ, ಐ.ಕುಂಞಿಪಳ್ಳಿ, ಶರೀಫ್ ಕಂಠಿ, ಪಿ.ಎ.ಮಹಮ್ಮದ್, ಜಮಾಲ್ ಬೆಳ್ಳಾರೆ, ಪೋಕರ್ ಕುಂಞಿ ಬಳ್ಳಕಜೆ, ಶಹೀದ್ ಪಾರೆ, ಧೀರಾ ಕ್ರಾಸ್ತಾ, ಕೆ.ಎಂ.ಮುಸ್ತಫಾ, ಅಬೂಬಕ್ಕರ್ ಅಡ್ಕಾರ್, ಹಸೈನಾರ್ ಹಾಜಿ ಗೋರಡ್ಕ ಮೊದಲಾದವರು ಉಪಸ್ಥಿತರಿದ್ದರು.

Related posts