
ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸುವ ಪಾದಯಾತ್ರೆಗೆ ಅವರ ಪಕ್ಷದಲ್ಲೇ ಬೆಂಬಲವಿಲ್ಲ. ಬಿಜೆಪಿ ಪರಿವರ್ತನಾ ಯಾತ್ರೆ ಬಗ್ಗೆ ಮಾತನಾಡುವ ಬಗ್ಗೆ ಸಿಎಂ ಮೊದಲು ತಮ್ಮ ಪಕ್ಷದ ಸ್ಥಿತಿಯ ಬಗ್ಗೆ ಮತನಾಡಲಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಅವರು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು. ಬಿಜೆಪಿ ಯಾತ್ರೆಯ ಕುರಿತು ಹೇಳಿಕೆ ನೀಡಿದ ಸೊಗಡು ಶಿವಪ್ಪ ವಿರುದ್ದ ಕ್ರಮ ಹೈಕಮಾಂಡ್ಗೆ ಮನವಿ ಮಾಡಲಾಗುವುದು. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಶಿವಪ್ಪ ವಿರುದ್ದ ಈ ಹಿಂದೆಯೂ ಕ್ರಮ ತೆಗೆದುಕೊಳ್ಳಲಾಗಿತ್ತು. ನೋಟ್ ಬ್ಯಾನ್ ವಿರುದ್ದ ಕರಾಳ ದಿನ ಆಚರಿಸುವ ಕಾಂಗ್ರೆಸ್ಸಿಗರು ಮುರ್ಖರು. ಕಾಂಗ್ರೆಸ್ ಮುಖಂಡರೇ ಕಪ್ಪು ಹಣ ಹೊಂದಿದ್ದು ಇದರಿಂದ ಕಾಂಗ್ರೆಸ್ ಚಟಪಡಿಕೆ ಉಂಟಾಗಿದೆ ಎಂದು ಹೇಳಿದರು.