Header Ads
Header Ads
Breaking News

ಸಿದ್ದರಾಮಯ್ಯ ಪಕ್ಷಕ್ಕೆ ಬಂದಿದ್ದೇ ಕಾಂಗ್ರೆಸ್ ಮುಗಿಸುವುದಕ್ಕೆ ಅವರಿಂದಾಗಿ ಮೈತ್ರಿ ಸರ್ಕಾರ ಉಳಿದುಕೊಂಡಿಲ್ಲ : ಜನಾರ್ದನ ಪೂಜಾರಿ ವಾಗ್ದಾಳಿ

ಮಾಜಿ ಸಿಎಂ ಸಿದ್ದರಾಮಯ್ಯ ಪಕ್ಷಕ್ಕೆ ಬಂದಿದ್ದೇ ಕಾಂಗ್ರೆಸ್ ಮುಗಿಸುವುದಕ್ಕೆ. ಅವರಿಂದಾಗಿ ಮೈತ್ರಿ ಸರ್ಕಾರ ಉಳಿದುಕೊಂಡಿಲ್ಲ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನ ಕುದ್ರೋಳಿಯಲ್ಲಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ, ದೇವೇಗೌಡರಿಂದ ಮೈತ್ರಿ ಸರ್ಕಾರ ಉಳಿದಿದೆ. ಸರ್ಕಾರ ಉಳಿಯುವಲ್ಲಿ ದೊಡ್ಡಗೌಡರದ್ದೇ ಮಹತ್ವದ ಪಾತ್ರ ಅಂದ್ರು. ಇದೇ ವೇಳೆ ಶಾಸಕ ಆನಂದ್ ಸಿಂಗ್ ಮೇಲಿನ ಹಲ್ಲೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದಲ್ಲಿ ರಾಜಕೀಯ ಕೊಳಕಾಗಿದೆ. ನಾನು ಮಾಡಿದ್ದೇ ಸರಿ ಎಂಬ ಭಾವನೆ ಬಂದಿದೆ. ಅದಕ್ಕೆ ದಾರಿಯಲ್ಲಿ ಪೆಟ್ಟು ತಿಂದಿದ್ದಾರೆ, ಜನ ಪೆಟ್ಟು ಕೊಡೋದು ಮಾತ್ರ ಬಾಕಿಯಿದೆ ಎಂದು ಕಿಡಿಕಾರಿದ್ರು. ಇನ್ನು ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಪ್ರವೇಶ ನೀಡಿರುವುದು ಕಾಂಗ್ರೆಸ್‌ಗೆ ಬಹುದೊಡ್ಡ ಶಕ್ತಿ. ಪ್ರಿಯಾಂಕ ಗಾಂಧಿ ನೆಹರೂ ಕುಟುಂಬದ ಕುಡಿ. ಅವರ ಆಗಮನದಿಂದ ಕಾಂಗ್ರೆಸ್‌ಗೆ ಇಲ್ಲಿವರಗೆ ಸಿಗದ ಶಕ್ತಿ ಸಿಗಲಿದೆ. ರಾಹುಲ್ ಗಾಂಧಿ ಗೆ ಶಕ್ತಿ ಇದೆ, ಅದು ಪ್ರಿಯಾಂಕಾ ಬಂದ ಮೇಲೆ ಇನ್ನೂ ಜಾಸ್ತಿಯಾಗಲಿದೆ. ಮೋದಿಯವರಿಗೆ ನಿದ್ದೆ ಬಾರದ ರೀತಿಯಲ್ಲಿ ಪ್ರಿಯಾಂಕಾ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

Related posts

Leave a Reply