Breaking News

ಸಿದ್ದಾಪುರದಲ್ಲಿ ಬೀದಿ ಕಾಮಣ್ಣನ ಕಿರುಕುಳಕ್ಕೊಳಗಾದ ಬಾಲಕಿ, ಶಂಕರನಾರಾಯಣ ಪೊಲೀಸ್ ಅತಿಥಿಯಾದ ಕಾಮಣ್ಣ

ಶೇಡಿಮನೆಯಲ್ಲಿ ಯುವತಿಯೋರ್ವಳು ಬೀದಿ ಕಾಮಣ್ಣರ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಮಾಸುವ ಮುನ್ನ ತಾಲೂಕಿನ ಸಿದ್ದಾಪುರದಲ್ಲಿ ಬಾಲಕಿ ಬೀದಿ ಕಾಮಣ್ಣನ ಕಿರುಕುಳಕ್ಕೊಳಗಾದ ಘಟನೆ ಸಿದ್ದಾಪುರ ಪೇಟೆಯಲ್ಲಿ ನಡೆದಿದೆ.
ಸಿದ್ದಾಪುರ ಸಮೀಪದ ಊರಿನ ಅಪ್ರಾಪ್ತ ಹೈಸ್ಕೂಲ್ ಬಾಲಕಿಯೋರ್ವಳು ಶಾಲೆಯನ್ನು ಮುಗಿಸಿ ತನ್ನ ಮನೆಗೆ ತೆರಳಲು ಸಿದ್ದಾಪುರ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸಂದರ್ಭ ಈ ಘಟನೆ ನಡೆದಿದ್ದು, ಅಶ್ರಫ್ ಎನ್ನುವವನು ಕೈ ಸನ್ನೆ ಕಣ್ಣಸನ್ನೆಗಳ ಮೂಲಕ ಪುಸಲಾಯಿಸುವ ಕೆಲಸ ಮಾಡುತ್ತಿದ್ದ, ಇದರಿಂದ ರೋಸಿ ಹೋದ ಬಾಲಕಿ ಸ್ಥಳದಲ್ಲೇ ಅವನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಈ ಸಂದರ್ಭ ಸ್ಥಳದಲ್ಲಿ ಒಟ್ಟಾದ ನೂರಾರು ಸಾರ್ವಜನಿಕರು, ಇವನನ್ನು ತರಾಟೆಗೆ ತೆಗೆದುಕೊಂಡು ಧರ್ಮದೇಟು ನೀಡಿದ್ದಾರೆ. ಅನಂತರ ಸ್ಥಳಕ್ಕೆ ಬಂದ ಶಂಕರನಾರಾಯಣ ಠಾಣೆ ಪೊಲೀಸರು ಅವನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಬಾಲಕಿಯ ಪೋಷಕರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆ ಪೊಲೀಸರು ಫೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Related posts

Leave a Reply