Header Ads
Breaking News

ಸಿಪಿಎಂ ನ ಹಿಂಸಾ ರಾಜಕೀಯ ಪ್ರಚಾರ ವಿಷವಾಗಲಿದೆ : ಮುಲ್ಲಪಳ್ಳಿ ರಾಮಚಂದ್ರನ್ ಹೇಳಿಕೆ

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಭಿವೃದ್ಧಿ ಜೊತೆ ಶಬರಿಮಲೆ ದೇಗುಲ ಹಾಗೂ ಪೆರಿಯದ ಯುವ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ ಸೇರಿದಂತೆ ಸಿಪಿಎಂನ ಹಿಂಸಾತ್ಮಕ ರಾಜಕೀಯ ಪ್ರಚಾರ ವಿಷಯವಾಗಲಿದೆ ಎಂದು ಕೇರಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್ ಹೇಳಿದರು.ಉಪಚುನಾವಣೆ ಪ್ರಚಾರಕ್ಕೆ ಆಗಮಿಸಿದ ಅವರು ಉಪ್ಪಳದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಉಪಚುನಾವಣೆಯಲ್ಲಿ ಸಿಪಿಎಂ ಮತ್ತು ಬಿಜೆಪಿ ನಡುವೆ ರಹಸ್ಯ ಒಪ್ಪಂದ ಮಾಡಿಕೊಂಡಿದೆ. ಬಿಜೆಪಿ ಅಭ್ಯರ್ಥಿ ಕುಂಟಾರು ರವೀಶ ತಂತ್ರಿ ಯವರಿಂದ ಆಶೀರ್ವಾದ ಪಡೆದು ಸಿಪಿಎಂ ಅಭ್ಯರ್ಥಿ ಶಂಕರ ರೈ ಪ್ರಚಾರ ಕಾರ್ಯ ಆರಂಭಿಸಿರುವುದು ಸಾಕ್ಷಿ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಲೀಗ್ ರಾಜ್ಯ ಕೋಶಾಧಿಕಾರಿ ಸಿ.ಟಿ ಆಹ್ಮದಲಿ, ಸಂಸದ ರಾಜ್ ಮೋಹನ್ ಉಣ್ಣಿಟ್ಟಾನ್, ಹಕೀಮ್ ಕುನ್ನಿಲ್, ಎ ಗೋವಿಂದ ಸೇರಿದಂತೆ ಹಲವರು ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *