Header Ads
Breaking News

ಸಿಪಿಐ(ಎಂ)ನ ವತಿಯಿಂದ ಜನ ಜಾಗೃತಿ ಮಿಲನ; ಸಂಘ ಪರಿವಾರದ ಅಜೆಂಡಾ ಪ್ರತಿಭಟಿಸಿ ಜನಜಾಗೃತಿ ಮಿಲನ

ಮಂಜೇಶ್ವರ: ರಾಷ್ಟ್ರ ವ್ಯಾಪಕವಾಗಿ ಕೋಮು ಗಲಭೆಯನ್ನು ಹತ್ತಿಕ್ಕಿ ಗಲಭೆಯನ್ನು ಸೃಷ್ಟಿಸಿ ಅರಾಜಕತೆಯನ್ನುಂಟುಮಾಡಲು ಪ್ರಯತ್ನಿಸುತ್ತಿರುವ ಸಂಘ ಪರಿವಾರದ ಅಜೆಂಡಾವನ್ನು ಪ್ರತಿಭಟಿಸಿ ಸಿಪಿಐ (ಎಂ) ನ ವತಿಯಿಂದ ಜನಜಾಗೃತಿ ಮಿಲನವನ್ನು ಹಮ್ಮಿಕೊಳ್ಳಲಾಯಿತು.

ಹೊಸಂಗಡಿ ಜಂಕ್ಷನಿನಲ್ಲಿ ನಡೆದ ಜನ ಜಾಗೃತಿ ಮಿಲನವನ್ನು ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕೆ ವಿ ಕುಂಞ ರಾಮನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೃಷಿ ವಲಯ, ಅರ್ಥಿಕ ಸಂಪತ್ತುಗಳ ಕುಸಿತ ಹಾಗೂ ನಿರುದ್ಯೋಗ ಇವುಗಳು ರಾಷ್ಟ್ರ ವ್ಯಾಪಕವಾಗಿ ತಾಂಡವಾಡುತ್ತಿರುವಾಗ ಜನರ ಶ್ರದ್ದೆಯನ್ನು ಬೇರೆ ಕಡೆಗೆ ತಿರುಗಿಸಲು ಬಿಜೆಪಿಯ ಘಟಕ ಸಂಘಟನೆಯಾದ ಬಜರಂಗದಳದ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ಕೋಮು ಧ್ವೇಷದ ಭಾಷಣಗಳನ್ನು ಮಾಡಿ ಗಲಭೆಯನ್ನು ಸೃಷ್ಟಿಸುತ್ತಿದೆ ಎಂದು ಅವರು ಹೇಳಿದರು.

ಏರಿಯಾ ಸಮಿತಿ ಸದಸ್ಯ ಡಿ. ಬೂಬ ಅಧ್ಯಕ್ಷತೆ ವಹಿಸಿದರು. ಲೋಕಲ್ ಕಾರ್ಯದರ್ಶಿ ಬಿ ಕಮಲಾಕ್ಷ, ಗೀತಾ ಸಾಮಣಿ, ಪ್ರಶಾಂತ್ ಕನಿಲ, ಡಿ ಕಮಲಾಕ್ಷ, ಸಾದಿಖ್ ಚೆರುಗೋಳಿ ಮೊದಲಾದವರು ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *