Header Ads
Header Ads
Header Ads
Breaking News

ಸಿಪಿ‌ಎಂ ಕಾರ್ಯಕರ್ತನಿಗೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ಗಾಯಗೊಂಡ ಸಿಪಿ‌ಎಂ ಕಾರ್ಯಕರ್ತ ಆಸ್ಪತ್ರೆಗೆ ದಾಖಲು ಮಂಜೇಶ್ವರದ ಬಾಯಾರಿನಲ್ಲಿ ನಡೆದ ಘಟನೆ

 

ಮಂಜೇಶ್ವರದ ಬಾಯಾರಿನಲ್ಲಿ ನಡೆದುಕೊಂಡು ಹೋಗುತಿದ್ದ ಸಿಪಿ‌ಎಂ ಕಾರ್ಯಕರ್ತನನ್ನು ತಡೆದು ನಿಲ್ಲಿಸಿ ಬಿಜೆಪಿ ಕಾರ್ಯಕರ್ತರು ಹಲ್ಲೆಗೈದು ಗಂಭೀರವಾಗಿ ಗಾಯಗೊಳಿಸಿದ್ದಾರೆ.

ಹಲ್ಲೆಯಿಂದ ಗಾಯಗೊಂಡ ಸಿಪಿ‌ಎಂ ಕಾರ್ಯಕರ್ತ ಉಮೇಶ್ ದೇವಾಡಿಗರನ್ನು ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಡಿವೈ‌ಎಫ್‌ಐ ಸೋಮವಾರದಂದು ಪೈವಳಿಕೆ ಪಂಚಾಯತ್ ವೈಪಲ್ಯಕ್ಕೆ ವಿರೋಧವನ್ನು ವ್ಯಕ್ತಪಡಿಸಿ ನಡೆಸಲಿರುವ ಪ್ರತಿಭಟನೆಗೆ ಪ್ರಚಾರ ನಡೆಸುವುದನ್ನು ಪ್ರಶ್ನಿಸಿ ಹಲ್ಲೆಗೈದಿರುವುದಾಗಿಯೂ ದೂರಲಾಗಿದೆ. ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ವರದಿ: ರೆಹಮಾನ್ ಮಂಜೇಶ್ವರ

Related posts

Leave a Reply