Header Ads
Breaking News

ಸಿಬಿಎಸ್‍ಸಿ ಫಲಿತಾಂಶ: ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಗೆ 100 ಶೇ. ಫಲಿತಾಂಶ

ತಲಪಾಡಿಯಲ್ಲಿರುವ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಗೆ ಸತತ 10ನೇ ವರ್ಷವೂ ಸಿಬಿಎಸ್‍ಸಿ ಪಠ್ಯ ಕ್ರಮದ 10ನೇ ತರಗತಿಯಲ್ಲಿ 100 ಶೇಕಡಾ ಫಲಿತಾಂಶ ದಾಖಲಿಸಿದೆ.

ತಲಪಾಡಿಯಲ್ಲಿರುವ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆ ಸಿಬಿಎಸ್‍ಸಿಯಲ್ಲಿ ವಿಶೇಷ ಸಾಧನೆ ಮಾಡಿದೆ. ಪ್ರತಿ ವರುಷವೂ ಶೇ. 100 ಫಲಿತಾಂಶದೊಂದಿಗೆ ವಿದ್ಯಾರ್ಥಿಗಳು ತೇರ್ಗಡೆಗೊಳ್ಳುತ್ತಿರುವುದು ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಂತಾಗಿದೆ. ಈ ಬಾರಿಯೂ ಶೇ.100 ಫಲಿತಾಂಶ ಈ ಶಾಲೆಗೆ ದೊರೆತಿದೆ.

ಒಟ್ಟು 211 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 50 ವಿದ್ಯಾರ್ಥಿಗಳು ಶೇಕಡ 90 ಕ್ಕಿಂತ ಅಧಿಕ ಅಂಕ ಗಳಿಸಿದ್ದು, 70 ವಿದ್ಯಾರ್ಥಿಗಳು ಶೇಕಡ 80 ರಿಂದ 90 ಶೇಕಡ ಅಂಕ, 55 ವಿದ್ಯಾರ್ಥಿಗಳು ಶೇಕಡ 70 ರಿಂದ 80 ಶೇಕಡ ಅಂಕ, 36 ವಿದ್ಯಾರ್ಥಿಗಳು ಶೇಕಡ 70 ರಿಂದ 50 ಶೇಕಡ ಅಂಕಗಳನ್ನು ಗಳಿಸಿರುತ್ತಾರೆ. ಹರ್ಷಿತ್ ಎಂ. ಎಲ್, ಶೇಕಡ 97 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ.
ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Related posts

Leave a Reply

Your email address will not be published. Required fields are marked *