Header Ads
Header Ads
Breaking News

ಸಿರಿ ಧಾನ್ಯಗಳ ಆಹಾರ ಮೇಳ ಮತ್ತು ಪ್ರದರ್ಶನ ಫೆ.3 ಮತ್ತು 4ರಂದು ನಡೆಯಲಿರುವ ಕಾರ್ಯಕ್ರಮ ಕಾರ್ಕಳದ ಪ್ರವಾಸಿ ಮಂದಿರದಲ್ಲಿ ಆಯೋಜನೆ

ಆರೋಗ್ಯಕರ ಆಹಾರ ಪದ್ದತಿ ಜಾರಿಗೆ ತರುವ ಉದ್ದೇಶದಿಂದ ಸಿರಿ ಧಾನ್ಯಗಳ ಆಹಾರ ಮೇಳವನ್ನು ಕಾರ್ಕಳ ಬಾಹುಬಲಿ ಪ್ರವಚನ ಮಂದಿರದಲ್ಲಿ ಫೆಬ್ರವರಿ ೩ ಮತ್ತು ೪ರಂದು ಆಯೋಜಿಸಲಾಗಿದೆ ಎಂದು ಯೋಜನಾಧಿಕಾರಿ ಪುರುಷೋತ್ತಮ್ ತಿಳಿಸಿದ್ದಾರೆ.ಅವರು ಕಾರ್ಕಳದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕೊರತೆಯಿಂದ ಕಣ್ಮರೆಯಾದ ಗ್ರಾತದಲ್ಲಿ ಚಿಕ್ಕ ಧಾನ್ಯಗಳಾದ ನವಣೆ, ಸಾವೆ, ಊದಲು, ಹಾರಕ, ಕೊರಲೆ, ಸಜ್ಜೆ, ಜೋಳ, ಬರಗು ಮತ್ತು ರಾಗಿ ಇವುಗಳು ಹಿಂದಿನವರ ಆರೋಗ್ಯ ಪದ್ದತಿಯಾಗಿದ್ದು ಇವುಗಳನ್ನು ಪುನರ್ ಬಳಕೆಯಾಗುವಂತೆ ಮತ್ತೆ ಜನರಿಗೆ ಪರಿಚಯಿಸುವ ಉದ್ದೇಶವಾಗಿದೆ. ಕಾರ್ಯಕ್ರಮದ ಮಳಿಗೆ ಉದ್ಘಾಟನೆಯನ್ನು ಶಾಸಕರಾದ ವಿ. ಸುನೀಲ್ ಕುಮಾರ್ ರವರು ನೆರವೇರಿಸಲಿದ್ದಾರೆ. ಮಾಜಿ ಶಾಸಕರಾದ ಗೋಪಲ್ ಭಂಡಾರಿಯುವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಕೃಷ್ಣ, ಉಮೇಶ್ ವಿ.ಕೆ., ಶ್ರೀಮತಿ ಯಶೋದ ಉಪಸ್ಥಿತರಿದ್ದರು.
ವರದಿ: ಕೆ.ಎಂ. ಖಲೀಲ್ ಕಾರ್ಕಳ

Related posts

Leave a Reply