Header Ads
Breaking News

ಸಿವಿಲ್ ಕಂಟ್ರಾಕ್ಟರ್ ಅಸೋಸಿಯೇಷನ್‍ನಿಂದ ಮರಳುಗಾರಿಕೆ ಸ್ಥಗಿತದ ಬಗ್ಗೆ ಪ್ರತಿಭಟನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿ.ಆರ್. ಝೆಡ್ ವಲಯದಲ್ಲಿ ಮರಳುಗಾರಿಕೆ ಸ್ಥಗಿತಗೊಂಡು ಸುಮಾರು 12 ತಿಂಗಳುಗಳಾಗಿದ್ದು, ಕಟ್ಟಡ ಕಾಮಗಾರಿಗಳೆಲ್ಲವೂ ಸ್ಥಗಿತಗೊಂಡಿದೆ. ನಾನ್ ಸಿಆರ್‍ಝೆಡ್ ವಲಯದಲ್ಲಿ ಅಪರೂಪಕ್ಕೆ ದೊರಕುವ ಮರಳಿನ ಬೆಲೆ ದುಬಾರಿಯಾಗಿದ್ದು, ಅದು ಗಾರೆ ಕೆಲಸಕ್ಕೆ ಉಪಯುಕ್ತವಲ್ಲ. ಹಾಗಾಗಿ ಕೂಡಲೇ ಮರಳು ಸಾಗಾಟಕ್ಕೆ ಅನುಮತಿ ನೀಡಬೇಕೆಂದು ಆಗ್ರಹಿಸಿ ಸಿವಿಲ್ ಕಂಟ್ರಾಕ್ಟರ್ ಅಸೋಸಿಯೇಶನ್ ವತಿಯಿಂದ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿವಿಲ್ ಕಂಟ್ರಾಕ್ಟರ್ ಅಸೋಸಿಯೇಶನ್‍ನ ಅಧ್ಯಕ್ಷರಾದ ಪುರುಷೋತ್ತಮ ಕೊಟ್ಟಾರಿ ಅವರು ಬಿಜೆಪಿ ಸರ್ಕಾರ ಬಂದ ಬಳಿಕ ಮರಳುಗಾರಿಕೆ ಸ್ಥಗಿತಗೊಂಡಿದೆ. ಮರಳು ಸಾಗಾಟ ಸ್ಥಗಿತಗೊಂಡ ಬಳಿಕ ನಾವೆಲ್ಲ ಅತಂತ್ರರಾಗಿದ್ದೇವೆ. ನಾನ್ ಸಿಆರ್‍ಝೆಡ್ ಮರಳು ಉಪಯುಕ್ತವಾಗುತ್ತಿಲ್ಲ. ಹಾಗಾಗಿ ಕೂಡಲೇ ಮರಳು ಪೂರೈಕೆ ಮಾಡಬೇಕೆಂದು ಆಗ್ರಹಿಸಿದರು.
ಆನಂತರ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರಾಯ್ ಕ್ಯಾಸ್ತಲಿನೋ ಅವರು, ಸಿವಿಲ್ ಕಂಟ್ರಾಕ್ಟ್ ಅಸೋಸಿಯೇಶನನ್ನು ಪ್ರತಿಭಟನೆ ಮಾಡುವ ಸಂಘಟನೆಯಾಗಿ ಮಾಡಿದ್ದಾರೆ. ನಮ್ಮನ್ನು ಕಳ್ಳ ಸಾಗಾಣಿಕೆದಾರರಾಗಿ ನೋಡುತ್ತಿದ್ದಾರೆ. ನಾವಿಲ್ಲಿ ಪ್ರತಿಭಟನೆ ಮಾಡುವಂತೆ ಮಾಡಿದ್ದು ಯಾವ ವ್ಯವಸ್ಥೆ ಎಂದು ಪ್ರಶ್ನಿಸಿದ ಅವರು, ಕಳೆದ 35 ವರ್ಷಗಳಿಂದ ಸಿವಿಲ್ ಕಂಟ್ರಾಕ್ಟದಾರರಾಗಿ ದುಡಿಯುತ್ತಿದ್ದೇನೆ. ಇದೀಗ ಅತಂತ್ರ ವ್ಯವಸ್ಥೆಯಲ್ಲಿ ದಿನ ದೂಡುತ್ತಿದ್ದೇವೆ ಎಂದು ಹೇಳಿದರು.ಈ ಸಂದರ್ಭ ಪ್ರತಿಭಟನೆಯಲ್ಲಿ ಸವಿಲ್ ಕಂಟ್ರಾಕ್ಟ್‍ದಾರರ ಸದಸ್ಯರುಗಳು ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *