Breaking News

ಸುಜೀರು ಪರಿಸರದ ಜನರಿಗೆ ಕೊನೆಗೂ ರಸ್ತೆ ಭಾಗ್ಯ, ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿ ಆರಂಭ, ಸಚಿವ ಖಾದರ್ ಅನುದಾನ ಮಂಜೂರು

ಕಳೆದ ಹಲವಾರು ವರ್ಷಗಳಿಂದ ಸರಿಯಾದ ರಸ್ತೆಯಿಲ್ಲದೆ ನಡೆದಾಡಲು ಪರಿತಪಿಸುತ್ತಿದ್ದ ಪುದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಜೀರು ಹೊಸಮನೆ ಪರಿಸರದ ಜನರಿಗೆ ಕೊನೆಗೂ ರಸ್ತೆ ಭಾಗ್ಯ ಒದಗಿದೆ. ರಾಜ್ಯ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ಯು. ಟಿ. ಖಾದರ್ ಅವರ ಪ್ರದೇಶಾಭಿವೃದ್ದಿ ನಿಧಿಯಡಿ ರಸ್ತೆ ಮಂಜೂರಾಗಿದ್ದು ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಪುದು ಗ್ರಾಮದ ಮುಖ್ಯ ರಸ್ತೆಗಳು ಸೇರಿದಂತೆ ಬಹುತೇಕ ಒಳ ರಸ್ತೆಗಳು ಡಾಮಾರು ಕಂಡಿದೆ. ಸುಜೀರು ಮಲ್ಲಿಯದತ್ತ ನಗರದಿಂದ ಸತ್ಯದೈವ ಕೋರ್‍ದಬ್ಬು ದೈವಸ್ಥಾನದವರೆಗೆ ಸರಿಯಾದ ರಸ್ತೆಯಿಲ್ಲದೆ ಜನರು ಸುತ್ತು ಬಳಸಿ ಹೋಗ ಬೇಕಿತ್ತು. ಈ ಬಗ್ಗೆ ಜಿ. ಪಂ. ಮಾಜಿ ಸದಸ್ಯ ಉಮ್ಮರ್ ಫಾರೂಕ್ ನೇತೃತ್ವದಲ್ಲಿ ಸ್ಥಳೀಯ ಶಾಸಕರು ಆಗಿರುವ ಆಹಾರ ಸಚಿವ ಯು. ಟಿ. ಖಾದರ್ ಅವರಿಗೆ ನೀಡಿದ ಮನವಿಯಂತೆ ಸಚಿವರು ತಕ್ಷಣ ಸ್ಪಂದಿಸಿ ತನ್ನ ಪ್ರದೇಶಾಭಿವೃದ್ದಿ ನಿಧಿಯಡಿ ಈ ರಸ್ತೆ ಮಂಜೂರುಗೊಳಿಸಿದ್ದಾರೆ. ಶುಕ್ರವಾರದಿಂದಲೇ ಹೊಸ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು ಸುಮಾರು ೮ ಲಕ್ಷ ರುಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಗೊಳ್ಳಲಿದೆ. ಈ ಮೂಲಕ ಈ ಭಾಗದ ಹಲವು ಮನೆಗಳಿಗೆ ಸಂಪರ್ಕ ರಸ್ತೆ ನಿರ್ಮಾಣವಾದಂತಾಗಿದೆ.
ಸ್ಥಳೀಯ ಪ್ರಮುಖರಾದ ಅರುಣ್‌ಕುಮಾರ್ ಶೆಟ್ಟಿ ನುಳಿಯಾಳುಗುತ್ತು ಅವರು ರಸ್ತೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಸಚಿವ ಯು. ಟಿ. ಖಾದರ್ ಅವರು ಜನರ ಬಹುದಿನಗಳ ಬೇಡಿಕೆಯಂತೆ ಈ ರಸ್ತೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳ ಆಪ್ತ ಸಚಿವರಾಗಿ ರಾಜ್ಯದ ನಂ. ೧ ಮಂತ್ರಿಯಾಗಿರುವುದು ನಮ್ಮ ಕ್ಷೇತ್ರದ ಹೆಮ್ಮೆ ಎಂದರು. ಈ ಸಂದರ್ಭ ಜಿ. ಪಂ.ನ ಮಾಜಿ ಸದಸ್ಯ ಉಮ್ಮರ್ ಫಾರೂಕ್, ಪುದು ಗ್ರಾ. ಪಂ. ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಮಾಜಿ ಅಧ್ಯಕ್ಷ ಅಖ್ತರ್ ಹುಸೈನ್, ಸದಸ್ಯರಾದ ರಮ್ಲಾನ್, ಲತೀಫ್ ಕುಂಜತ್‌ಕಲ, ಇಕ್ಬಾಲ್ ಸುಜೀರ್, ಮಾಲತಿ, ಕಿಶೋರ್, ಸಲೀಂ ಮಲ್ಲಿ, ನರೇಂದ್ರನಾಯಕ್, ರಾಜೇಶ್ ಮಲ್ಲಿ, ಗಿರಿಧರ್ ಶೆಟ್ಟಿ ಹೊಸಮನೆ, ರಾಮಕೃಷ್ಣ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಗಿರೀಶ್‌ಭಟ್, ಅರುಣ್‌ಪ್ರಕಾಶ್ ಡಿಸೋಜಾ ಹಾಜರಿದ್ದರು.

Related posts

Leave a Reply