Header Ads
Header Ads
Header Ads
Breaking News

ಸುಜ್ಲಾನ್ ಕಾರ್ಮಿಕರ ಯೂನಿಯನ್ ಇಬ್ಭಾಗ.. ನಮ್ಮದೇ ಯೂನಿಯನ್ ಅಧಿಕೃತ ಎನ್ನುತ್ತಿದೆ ಎರಡು ತಂಡ..

 

ಸುಜ್ಲಾನ್ ಕಂಪನಿಯ ಕಾರ್ಮಿಕ ಯೂನಿಯನ್ ಇಬ್ಭಾಗಗೊಂಡಿದ್ದು, ಇದೀಗ ಅವಳಿ ತಂಡಗಳು ನಮ್ಮ ಯೂನಿಯನ್ ಅಧಿಕೃತ ಎಂಬುದಾಗಿ ಘೋಷಿಸುವ ಮೂಲಕ ಪ್ರಕರಣ ಕಬ್ಬಿಣದ ಕಡಲೆಕಾಯಿಯಂತ್ತಾಗಿದೆ.

ಕಳೆದ ಸುಮಾರು ೨೦ ದಿನಗಳ ಹಿಂದೆ ಕಾರ್ಮಿಕರ ತಂಡವೊಂದು ಪಡುಬಿದ್ರಿಯ ಖಾಸಗಿ ಹಾಲ್‌ನಲ್ಲಿ ಪೊಲೀಸರ ಉಪಸ್ಥಿತಿಯಲ್ಲಿ ಚುನಾವಣಾ ಪ್ರಕೃಯೆ ನಡೆಸಿ, ತಮ್ಮ ನಾಯಕನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದರು. ಈ ಸಂದರ್ಭ ಮಾದ್ಯಮಕ್ಕೆ ಮಾಹಿತಿ ನೀಡಿದ ಅವರು, ಈ ಹಿಂದೆ ಇದ್ದ ಯೂನಿಯನ್ ಅವಧಿ ಮುಗಿಯುವುದಕ್ಕೆ ಇನ್ನು ಕೂಡಾ ಮೂರು ತಿಂಗಳ ಕಾಲಾವಕಾಶವಿದ್ದರೂ, ಅವರ ಸರ್ವಾಧಿಕಾರದಿಂದ ಬೇಸತ್ತ ನಾವು ಕಾರ್ಮಿರೆಲ್ಲಾ ಒಂದಾಗಿ ಈ ಇಂದಿನ ಯೂನಿಯನ್ ರದ್ದುಗೊಳಿಸಿ ಚುನಾವಣೆಗೆ ಮುಂದಾಗಿದ್ದು, ಈ ಬಗ್ಗೆ ಪ್ರಸ್ತುತ ಸಮಿತಿಗೆ ಕಾನೂನು ಬದ್ಧವಾಗಿ ನಾವು ಲಿಖಿತ ನೋಟಿಸು ಕಳುಹಿಸಿದ್ದು, ಅದಕ್ಕೆ ಮನ್ನಣೆ ದೊರಕದಿರುವುದರಿಂದ ರಿಜಿಸ್ಟರ್‍ಡ್ ಪೋಸ್ಟ್ ಮೂಲಕ ನೋಟಿಸು ನೀಡಿ ಚುನಾವಣೆ ಮುಂದಾಗಿ, ಇದೀಗ ಚುನಾವಣೆ ನಡೆದು ಈ ಹಿಂದಿನ ಸಮಿತಿ ಚುನಾವಣೆಗೆ ಹಾಜರಾಗದ ಕಾರಣ ನಮ್ಮ ತಂಡದ ಸಮರ್ಥ ವ್ಯಕ್ತಿಯನ್ನು ನಾವು ಅವಿರೋಧವಾಗಿ ಆಯ್ಕೆಗೊಳಿಸಿದ್ದೇವೆ. ಮುಂದಿನ ದಿನದಲ್ಲಿ ಇದೇ ಅಧಿಕೃತ ಯೂನಿಯನ್ ಎಂಬುದಾಗಿ ಘೋಷಿಸಿದ್ದರು.

ಇದೀಗ ಮತ್ತೊಂದು ತಂಡ ಈ ಹಿಂದಿನ ಅಧ್ಯಕ್ಷ ನಿತೀನ್ ಪೂಜಾರಿ ನೇತೃತ್ವದಲ್ಲಿ ಸುದ್ಧಿಗೋಷ್ಠಿ ನಡೆಸಿ, ನಮ್ಮ ಸಮಿತಿಯ ಅವಧಿ ಮುಗಿಯುವುದಕ್ಕೆ ಇನ್ನೂ ಕೂಡಾ ಎಂಟು ತಿಂಗಳು ಬಾಕಿ ಇದ್ದು, ಏಕಾ‌ಏಕಿಯಾಗಿ ಐದು ಮಂದಿ ಕಾರ್ಮಿಕರು ಸ್ಥಳೀಯ ಕೆಲವರೊಂದಿಗೆ ಹಾಗೂ ಕಂಪನಿಯ ಕೆಲವು ವ್ಯಕ್ತಿಗಳೊಂದಿಗೆ ಸೇರಿ ಪಿತೂರಿ ನಡೆಸಿ ಕಾನೂನು ಬಾಹಿರವಾಗಿ ಚುನಾವಣೆ ಎಂಬ ನಾಟಕವಾಡಿ ಹೊಸ ಯೂನಿಯನ್ ರಚಿಸಿದ್ದೇವೆ ಎಂಬುದಾಗಿ ಘೋಷಿಸುತ್ತಿದ್ದು, ಅವರು ನಡೆಸಿದ್ದಾರೆ ಎನ್ನಲಾದ ಚುನಾವಣೆಗೆ ಯಾವುದೇ ಅಧಿಕಾರಿಗಳು ಭಾಗವಹಿಸದೆ ಅನಧಿಕೃತವಾಗಿ ನಡೆದಿದೆ. ಈ ಪ್ರಕೃಯೆ ನಮ್ಮ ಸಂಘಟನೆಯ ಒಗ್ಗಟ್ಟನ್ನು ಹಾಳು ಮಾಡಲು ಕೆಲವೇ ಮಂದಿ ನಡೆಸಿದ ತಂತ್ರವಾಗಿದೆ. ಅದಲ್ಲದೆ ಅಮಾಯಕ ಕಾರ್ಮಿಕರಿಂದ ತಲಾ ೬೦೦ ರೂ ಗಳಂತೆ ಒಂದುವರೆ ಲಕ್ಷ ವಸೂಲಿ ನಡೆಸಲಾಗಿದೆ, ಈ ವಸೂಲಿಗೆ ನಮ್ಮ ಅಧಿಕೃತ ಯೂನಿಯನ್ ಜವಾಬ್ದಾರಿಯಲ್ಲ. ಈ ನಮ್ಮ ಒಳ ಜಗಳದಿಂದಾಗಿ ಬಹುತೇಕ ಕಾರ್ಮಿಕರು ಹಾಗೂ ಗುತ್ತಿಗೆದಾರರರು ಕೆಲಸ ಕಳಕೊಳ್ಳುವಂತ್ತಾಗಿದೆ. ಆ ಕಾರಣದಿಂದ ನಮ್ಮಲ್ಲಿ ಮುನಿಸುಕೊಂಡು ಅನಧಿಕೃತ ಸ್ವಯಂ ಘೋಷಿತ ಯೂನಿಯನ್ ರಚಿಸಿದ ತಂಡದ ಸದಸ್ಯರು ತಮ್ಮ ತಪ್ಪನ್ನು ಅರಿತು ನಮ್ಮೊಂದಿಗೆ ಸೇರಿಕೊಳ್ಳುವುದಿದ್ದರೆ ಸ್ವಾಗತ ಎಂದಿದ್ದಾರೆ.

ವರದಿ-ಸುರೇಶ್ ಎರ್ಮಾಳ್

Related posts

Leave a Reply