Header Ads
Header Ads
Header Ads
Breaking News

ಸುಝ್ಲಾನ್ ಕಂಪೆನಿ ಮುಚ್ಚುಗಡೆ ಘೋಷಣೆ ಹಿನ್ನಲೆ ಮೂರನೇ ದಿನಕ್ಕೆ ಕಾಲಿಟ್ಟ ಕಾರ್ಮಿಕರ ಪ್ರತಿಭಟನೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುತ್ತಾರೆಂಬ ಗುಮಾನಿ ನ್ಯಾಯದೊರಕದೆ ಕದಲುವುದಿಲ್ಲ ಎನ್ನುವ ಕಾರ್ಮಿಕರು

ಸುಝ್ಲನ್ ಕಂಪೆನಿ ದಿಢೀರ್ ಮುಚ್ಚುಗಡೆ ಘೋಷಣೆ ಮಾಡಿದ್ದರಿಂದ ಬೀದಿಪಾಲಾದ ಕುಟುಂಬಗಳು ನಡೆಸುತ್ತಿದ್ದ ಪ್ರತಿಭಟನೆಯನ್ನು ಇಂದೂ ಮೂರನೇ ದಿನಕ್ಕೆ ಕಾಲಿಟ್ಟಿದೆ. ಕೆಲಸ ಕಳೆದುಕೊಂಡ 326 ಕಂಪೆನಿಯ ಕಾರ್ಮಿಕರು ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 200 ಕ್ಕೂ ಅಧಿಕ ಕಾರ್ಮಿಕರು ಮುಖ್ಯ ಪ್ರವೇಷದ್ವಾರದ ಮುಂಭಾಗದಲ್ಲಿ ಪ್ರತಿಭಟನೆ ನಡೇಸುತ್ತಿದ್ದಾರೆ. ಕಾರ್ಮಿಕರ ಹೋರಾಟಕ್ಕೆ ಇಂಟಕ್ ಬೆಂಬಲ ಸೂಚಿಸಿದೆ.

ಮಂಗಳವಾರ ಕಂಪೆನಿ ಮುಚ್ಚುಗಡೆ ವಿಷಯ ತಿಳಿಸುತ್ತಲೇ ಪ್ರತಿಭಟನೆ ಆರಂಭಿಸಿದ್ದ ಕಾರ್ಮಿಕರು ಸಂಜೆ 7 ರವರೆಗೆ ಪ್ರತಿಭಟನೆ ನಡೆಸಿದ್ದರು. ಇಂದು ಇವರ ಪ್ರತಿಭಟನೆ 3ನೇ ದಿನಕ್ಕೆ ಕಲೈಟ್ಟಿದ್ದು, ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕಾರ್ಮಿಕರು ಆಗ್ರಹಿಸಿದ್ದಾರೆ. ಇನ್ನು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸುವ ಗುಮಾನಿಯಿದ್ದು, ನ್ಯಾದೊರಕದೆ ಸ್ಥಳದಿಂದ ಕದಲುವುದಿಲ್ಲ ಎಂದು ಕಾರ್ಮಿಕರು ಪಟ್ಟು ಹಿಡಿದಿದ್ದಾರೆ.

ವರದಿ: ಸುರೇಶ್ ಎರ್ಮಾಳ್, ಪಡುಬಿದಿರೆ

Related posts

Leave a Reply