Header Ads
Breaking News

ಸುಡು ಬಿಸಿಲಿಗೆ ಮಳೆಯಿಂದ ತಂಪಾದ ಇಳೆ : ಬಂಟ್ವಾಳ, ಪುತ್ತೂರು ಇನ್ನಿತರ ಕಡೆಗಳಲ್ಲಿ ಬಂದ ಮಳೆ

ಬಂಟ್ವಾಳ: ಕಳೆದ ಕೆಲ ದಿನಗಳಿಂದ ಮುಂಜಾನೆಯ ವೇಳೆ ಮಂಜು ಮುಸುಕಿದ ದೃಶ್ಯ ಕಂಡು ಬರುತ್ತಿದ್ದರೆ ಇಂದು ಮುಂಜಾನೆ ಏಕಾಏಕಿ ಮಳೆಸುರಿದು ಅಚ್ಚರಿ ಮೂಡಿಸಿದೆ. ಈ ವರ್ಷದ ಮೊದಲ ವರ್ಷಧಾರೆ ಇದಾಗಿದ್ದು ಧಗೆಯೇರಿದ್ದ ಇಳೆ ತಂಪಾಗಿದೆ. ಇಂದು ಮುಂಜಾನೆಯದಲೇ ಮಂಜು ಮುಸಕಿದ ವಾತಾವರಣದ ಬದಲು ಮೋಡ ಕವಿದ ವಾತಾವರಣವಿದ್ದು ಬೆಳಗ್ಗಿನ ಜಾವವೇ ಕತ್ತಲು ಆವರಿಸಿತ್ತು. ಬಳಿಕ ಹನಿ ಹನಿಯಾಗಿ ಆರಂಭಗೊಂಡ ಮಳೆ ಧಾರಾಕಾರವಾಗಿ ಸುರಿಯಿತು. ನವ ವರ್ಷದ ಮಳೆ ಜನರಲ್ಲಿ ನವೋಲ್ಲಾಸ ಉಂಟು ಮಾಡಿದರೆ ಗ್ರಾಮೀಣ ಭಾಗದಲ್ಲಿ ಅಡಿಕೆ ಬೆಳೆಗಾರರು ಕಂಗೆಡುವಂತೆ ಮಾಡಿತು. ಬಂಟ್ವಾಳ ತಾಲೂಕಿನ ಕೆಲವಡೆ ಮಾತ್ರ ಮಳೆಯಾಗಿದ್ದು ಇನ್ನೂ ಹಲವು ಕಡೆ ಮೋಡದ ವಾತವರಣ ಮಾತ್ರ ಇತ್ತು.

Related posts

Leave a Reply

Your email address will not be published. Required fields are marked *