Breaking News

ಸುಧಾರಣೆ ಎನ್ನಲಾದ ಏಕರೂಪ ತೆರಿಗೆ ಜಿ‌ಎಸ್‌ಟಿ, ನಾಲ್ಕು ಹಂತದ ತೆರಿಗೆ ಜಾರಿಗೆ ಸಿದ್ಧತೆ

ದೇಶವನ್ನು ಏಕರೂಪದ ಮಾರುಕಟ್ಟೆಯನ್ನಾಗಿಸುವ, ತೆರಿಗೆ ಸುಧಾರಣೆ ಎಂದೇ ಬಣ್ಣಿಸಲಾಗಿರುವ ಸರಕು ಮತ್ತು ಸೇವಾ ತೆರಿಗೆ, ಶುಕ್ರವಾರ ನಡೆದ ಜಿ‌ಎಸ್ ಟಿ ಸಭೆಯಲ್ಲಿ ತೆರಿಗೆ ದರವನ್ನು ಅಂತಿಮಗೊಳಿಸಲಾಗಿದ್ದು, ಶಿಕ್ಷಣ ಮತ್ತು ಆರೋಗ್ಯಕ್ಕೆ ವಿನಾಯ್ತಿ ನೀಡಲಾಗಿದೆ.
ಶ್ರೀನಗರದಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ೨ ದಿನ ನಡೆದ ಜಿ‌ಎಸ್ ಟಿ ಸಭೆಯಲ್ಲಿ ಜುಲೈ ೧ರಿಂದ ದೇಶಾದ್ಯಂತ ಜಾರಿಯಾಗಲಿರುವ ಜಿ‌ಎಸ್ ಟಿ ಹಿನ್ನೆಲೆಯಲ್ಲಿ ಟೆಲಿಕಾಂ, ಇನ್ಸೂರೆನ್ಸ್, ಹೋಟೆಲ್ಸ್ ಹಾಗೂ ರೆಸ್ಟೋರೆಂಟ್ ಸೇರಿದಂತೆ ನಾಲ್ಕು ಸೇವಾ ತೆರಿಗೆಯನ್ನು ಅಂತಿಮಗೊಳಿಸಿದೆ. ೫೦ ಲಕ್ಷಕ್ಕಿಂತ ಕಡಿಮೆ ವಹಿವಾಟು ನಡೆಸುವ ರೆಸ್ಟೋರೆಂಟ್ ಗಳು ಜಿ‌ಎಸ್ ಟಿ ಅಡಿಯಲ್ಲಿ ಶೇ. ೫ರಷ್ಟಿ ತೆರಿಗೆ ಪಾವತಿಸಬೇಕು, ಎಸಿ ರಹಿತ ರೆಸ್ಟೋರೆಂಟ್ ಗಳು ಶೇ. ೧೨ರಷ್ಟು ತೆರಿಗೆ ಬೀಳಲಿದೆ. ಎಸಿ ಬಾರ್ ಅಂಡ್ ರೆಸ್ಟೋರೆಂಟ್ ಶೇ. ೧೮ರಷ್ಟು ತೆರಿಗೆ, ಪಂಚತಾರಾ ಹೋಟೆಲ್ ಗಳು ಶೇ. ೨೮ರಷ್ಟು ತೆರಿಗೆ ನಿಗದಿಪಡಿಸಿದೆ.
ಓಲಾ, ಉಬೇರ್ ಕ್ಯಾಬ್ ಗಳ ಸೇವೆಗೆ ಶೇ. ೫ರಷ್ಟು ತೆರಿಗೆ ವಿಧಿಸಿದೆ. ಸೆಲ್ಯೂನ್, ದೂರವಾಣಿ ಬಿಲ್ ಗಳಿಗೂ ಹೊಸ ತೆರಿಗೆ ದರದ ಬಿಸಿ ತಟ್ಟಲಿದೆ. ರೈಲು, ವಿಮಾನ ಹಾಗೂ ಸಾರಿಗೆ ಶೇ. ೫ರಷ್ಟು ತೆರಿಗೆ ಹೊರೆ ಕಡಿಮೆಯಾಗಲಿದೆ. ಅಲ್ಲದೇ ಜೂನ್ ೩ರಂದು ನಡೆಯಲಿರುವ ಜಿ‌ಎಸ್ ಟಿ ಸಭೆಯಲ್ಲಿ ಚಿನ್ನದ ಮೇಲಿನ ತೆರಿಗೆ ದರವನ್ನು ನಿಗದಿಪಡಿಸುವುದಾಗಿ ಜೇಟ್ಲಿ ಮಾಹಿತಿ ನೀಡಿದ್ದಾರೆ. ಹಾಲು, ಹಣ್ಣು, ತರಕಾರಿಗಳಿಗೆ ತೆರಿಗೆ ವಿನಾಯ್ತಿ. ಸಕ್ಕರೆ, ಟೀ, ಕಾಫಿ ಮತ್ತು ಖಾದ್ಯ ಎಣ್ಣೆಗೆ ಶೇ. ೫ರಷ್ಟು ಕಡಿಮೆ ದರದ ತೆರಿಗೆ ವಿಧಿಸಲಾಗಿದೆ. ಶೇವಿಂಗ್ ಮತ್ತು ಕೇಶ ತೈಲ, ಸೋಪು, ಟೂತ್ ಪೇಸ್ಟ್ ಗೆ ಶೇ. ೨೮ ತೆರಿಗೆ ಸಾಧ್ಯತೆ ಇದೆ. ಗುರುವಾರ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ ಎಲ್ಲ ರಾಜ್ಯಗಳ ಪ್ರತಿನಿಧಿಗಳ ಸಭೆಯಲ್ಲಿ ೧,೨೧೧ ವಸ್ತುಗಳ ಪೈಕಿ ೧,೨೦೫ಕ್ಕೆ ತೆರಿಗೆ ದರವನ್ನು ನಿಗದಿಪಡಿಸಲಾಗಿತ್ತು.

Related posts

Leave a Reply