Header Ads
Header Ads
Header Ads
Breaking News

ಸುಬ್ಬಯ್ಯಕಟ್ಟೆಯಲ್ಲಿ ನಿರ್ಮಿಸಿದ ಬಿ.ಎ.ಮೊಹಮ್ಮದ್ ಸ್ಮಾರಕ ಮಂದಿರ ಸಿಪಿ‌ಎಂ ಕೇಂದ್ರ ಸಮಿತಿಯ ಸದಸ್ಯ ಇ.ಪಿ.ಜಯರಾಜನ್‌ರಿಂದ ಉದ್ಘಾಟನೆ

ಮಂಜೇಶ್ವರ: ರಾಷ್ಟ್ರದ ಸಂವಿಧಾನಕ್ಕೆ ಮಾನ್ಯತೆ ನೀಡಿ ಮತಸೌಹಾರ್ಧತೆಯನ್ನು ಕಾಪಾಡುವಲ್ಲಿ ಯುವಜನರ ಪಾತ್ರ ಮಹತ್ತರವಾದುದು. ಸಿಪಿ‌ಎಂ ಪಕ್ಷದ ಕಾರ್ಯಕರ್ತರು ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ನಿಂತು ಸಾಮಾಜಿಕ ಪರಿವರ್ತನೆಗೆ ಮುಂದಾಗಬೇಕು ಎಂದು ಪಕ್ಷದ ಕೇಂದ್ರ ಸಮಿತಿಯ ಸದಸ್ಯ ಇ.ಪಿ.ಜಯರಾಜನ್ ಕರೆ ನೀಡಿದರು.

ಸಿಪಿ‌ಎಂ ಪಕ್ಷದ ಸಕ್ರೀಯ ಮುಖಂಡರಾಗಿ, ಗ್ರಾ.ಪಂ. ಸದಸ್ಯರಾಗಿ, ಸರ್ವಪಕ್ಷಗಳೊಂದಿಗೆ ಉತ್ತಮ ಭಾಂದವ್ಯದಿಂದಿದ್ದು, ಅಕಾಲಿಕವಾಗಿ ಮೃತರಾದ ಸುಬ್ಬಯ್ಯಕಟ್ಟೆಯ ಬಿ.ಎ.ಮೊಹಮ್ಮದ್ ರವರ ಸ್ಮರಣಾರ್ಥ ಪಕ್ಷದ ಕಾರ್ಯಕರ್ತರ ಮತ್ತು ನಾಗರಿಕರ ಸಹಕಾರದೊಂದಿಗೆ ಸುಬ್ಬಯ್ಯಕಟ್ಟೆಯಲ್ಲಿ ನಿರ್ಮಿಸಿದ ಬಿ.ಎ.ಮೊಹಮ್ಮದ್ ಸ್ಮಾರಕ ಮಂದಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಶಾಸಕ ನ್ಯಾಯವಾದಿ ಸಿ.ಎಚ್ ಕುಂಞಂಬು, ಡಾ.ವಿ.ಪಿ.ಪಿ.ಮುಸ್ತಫಾ, ಕೆ.ಆರ್.ಜಯಾನಂದ, ಸಾಬು ಅಬ್ರಹಾಂ, ಅಬ್ದುಲ್ ರಝಾಕ್ ಚಿಪ್ಪಾರು, ಬೇಬಿ ಶೆಟ್ಟಿ, ಭಾರತಿ ಜೆ.ಶೆಟ್ಟಿ ಶುಭಾಶಂಸನೆಗೈದರು.ಶಂಕರ ರೈ ಮಾಸ್ತರ್, ಸಾದಿಕ್ ಚೆರುಗೋಳಿ, ಅಜೇಶ್ ಕೊಟ್ಟುಡೇಲು, ಎಂ.ಎ.ಉಂಬು, ಕೆ.ಕೆ.ಅಬ್ದುಲ್ಲ ಉಪಸ್ಥಿತರಿದ್ದರು.

Related posts

Leave a Reply