Header Ads
Breaking News

ಸುಬ್ರಹ್ಮಣ್ಯ ದಲ್ಲಿ ಇಂದು ಪಂಚಮಿ ರಥೋತ್ಸವ

ಕುಕ್ಕೇ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಟಿ ಜಾತ್ರೆ ನಡೆಯುತ್ತಿದು ತೈಲಾಭ್ಯಂಜನ ಮತ್ತು ಪಂಚಮಿ ರಥೋತ್ಸವ ನಡೆಯಲಿದೆ.ರಾತ್ರಿ ಪಲ್ಲಕ್ಕಿ ಉತ್ಸವ ಮತ್ತು ಬಂಡಿ ಉತ್ಸವ ಜರುಗಲಿದೆ. ಆ ಬಳಿಕ ದೇವರು ಪಂಚಮಿ ರಥದಲ್ಲಿ ಕಾಶಿ ಕಟ್ಟೆ ಗಣೇಶನ ಸನ್ನಿಧಿಗೆ ತೆರಳಿ ಸವಾರಿ ಮಂಟಪದಲ್ಲಿ ಕಟ್ಟೆ ಪೂಜೆ ನಡೆಯಲಿದೆ. ಆ ಬಳಿಕ ಆಕರ್ಷಕ ಸುಡು ಮದ್ದಿನ ಪ್ರದರ್ಶನ ನಡೆಯಲಿದ್ದು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ.
ಕೋವಿಡ್ ನಿಯಮ ಪಾಲನೆ: ಕೋವಿಡ್ 19 ನಿಯಮಗಳನ್ನು ಸರಕಾರದ ಮಾರ್ಗ ಸೂಚಿಯ ಪ್ರಕಾರ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ದೇವಳದ ಆಡಳಿತಾಧಿಕಾರಿ ಡಾ. ಯತೀಶ್ ಉಳ್ಳಾಲ್ ರವರು ಆದೇಶಿಸಿದ್ದಾರೆ.ಬ್ರಹ್ಮರಥಕ್ಕೆ ಶಿಖರ ಮುಹೂರ್ತ : ಭಾನುವಾರ ನಡೆಯಲಿರುವ ಷಷ್ಟಿ ಕಾರ್ಯಕ್ರಮದ ಪ್ರಯುಕ್ತ ಶುಕ್ರವಾರ ಕ್ಷೇತ್ರ ಪುರೋಹಿತ ವೇದಮೂರ್ತಿ ಮಧುಸೂಧನ ಕಲ್ಲುರಾಯ ರವರು ಶಿಖರ ಮುಹೂರ್ತ ಪೂಜೆ ನೆರವೇರಿಸಿದರು.ಆ ಬಳಿಕ ಸ್ಥಳೀಯ ಮಲೆ ಕುಡಿಯ ಜನಾಂಗದವರು ಈ ಶಿಖರವನ್ನು ಬ್ರಹ್ಮರಥಕ್ಕೆ ಅಳವಡಿಸಿದರು. ಈ ಸಂದರ್ಭ ಮಲೆಕುಡಿಯ ಜನಾಂಗದ ಗುರಿಕಾರ ಐತಪ್ಪ ಅರ್ಗುಡಿ ಸಹಗುರಿಕಾರ ದಿನಕರ ಕುಲ್ಕುಂದ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *