Header Ads
Breaking News

ಸುಬ್ರಹ್ಮಣ್ಯ ಪೇಟೆಯಲ್ಲಿ ಕಾಡಾನೆ ಸವಾರಿ : ಭಕ್ತರನ್ನು ಮತ್ತು ಸ್ಥಳೀಯರನ್ನು ಭೀತಿ ಹುಟ್ಟಿಸಿದ ಕಾಡಾನೆ

ಪುರಾಣ ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಜನಸಂಚಾರ ಪೇಟೆಯಲ್ಲಿ ಒಂಟಿ ಸಲಗವೊಂದು ಗುರುವಾರ ಬೆಳಗ್ಗಿನ ಜಾವ ರಾಜಾರೋಷವಾಗಿ ಸಂಚರಿಸಿ ಭೀತಿ ಹುಟ್ಟಿಸಿದೆ.

ಇಂದು ಬೆಳಗ್ಗೆ ಸುಮಾರು 5:46ರ ಸಮಯಕ್ಕೆ ಮುಖ್ಯ ಪೇಟೆಯ ಕಾಶಿಕಟ್ಟೆ ಗಣಪತಿ ದೇವಸ್ಥಾನದ ಪಕ್ಕದ ಮಯೂರ ವಸತಿಗ್ರಹದ ಬಳಿಯಿಂದ ಕಾಶಿಕಟ್ಟೆ ಮುಖ್ಯ ಮಾರ್ಗವಾಗಿ ನೂಚಿಲ ಕಡೆಗೆ ಆನೆ ರಸ್ತೆಯಲ್ಲೇ ಸಂಚರಿಸಿದೆ. ವಾಹನ ಸಂಚಾರವಿರುವಾಗಲೇ ರಾಜ ಗಾಂಭೀರ್ಯದಿಂದ ಈ ಗಜರಾಜ ಹೆಜ್ಜೆ ಹಾಕಿದೆ. ಮೊದಲು ಕ್ಷೇತ್ರಕ್ಕಾಗಮಿಸಿದ ಭಕ್ತರು ಇದು ದೇಗುಲದ ಆನೆ ಆಗಿರಬಹುದು ಎಂದೆ ನಂಬಿದ್ದರು. ಆದರೆ ಇದು ಕಾಡಾನೆ ವಾಸ್ತವದಲ್ಲಿ ಎಂದು ನಂತರ ತಿಳಿದುಬಂದಿದೆ. ಆನೆ ಕುಕ್ಕು ಸುಬ್ರಹ್ಮಣ್ಯದಲ್ಲಿ ಕಂಡುಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸೆರೆಯಾಗಿದೆ.

Related posts

Leave a Reply

Your email address will not be published. Required fields are marked *