Header Ads
Breaking News

ಸುಬ್ರಹ್ಮಣ್ಯ -ಬಾಳುಗೋಡು ರಕ್ಷಿತಾರಣ್ಯದಲ್ಲಿ ಗಾಯಗೊಂಡ ಕಾಡಾನೆಗೆ ಚಿಕಿತ್ಸೆ

ಸುಬ್ರಹ್ಮಣ್ಯದ ಬಾಳುಗೋಡು ಮೀಸಲು ಅರಣ್ಯದಲ್ಲಿ ಆನೆಗಳ ಕಾದಾಟದಿಂದ ಕಳೆದ ಕೆಲವು ದಿನಗಳಿಂದ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಕಾಡಾನೆಗೆ ನಾಗರಹೊಳೆ ಅಭಯಾರಣ್ಯ ವನ್ಯ ಜೀವಿ ವಿಭಾಗದ ವೈದ್ಯಾಧಿಕಾರಿ ನೇತ್ರತ್ವದಲ್ಲಿ ಚಿಕಿತ್ಸೆ ನೀಡಲಾಗಿದೆ.

ಬಾಳುಗೋಡು ಮೀಸಲು ಅರಣ್ಯದಲ್ಲಿ ಗಾಯಗೊಂಡು ಸುತ್ತಾಡುತಿದ್ದ ಆನೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಚಿಕಿತ್ಸೆ ನೀಡಲಾಯಿತು. ನಾಗರಹೊಳೆ ಅಭಯಾರಣ್ಯದ ವೈದ್ಯಾಧಿಕಾರಿ ಡಾ. ಮುಜೀಬ್ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಿ ಆನೆಯನ್ನು ಆರೈಕೆ ಮಾಡಲಾಗಿದೆ. ಆನೆಯನ್ನು ಸಮತಟ್ಟಾದ ಸ್ಥಳಕ್ಕೆ ತರುವಲ್ಲಿ ಅರಣ್ಯಾಧಿಕಾರಿಗಳ ಪ್ರಯತ್ನ ಯಶಸ್ವಿಯಾದ ಬೆನ್ನಲ್ಲೆ ಚಿಕಿತ್ಸೆ ಆರಂಬಿಸಲಾಯಿತು. ಸುಳ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಸ್ಟ್ರಿನ್ ಪಿ ಸೋನ್ಸ್ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯ ವಲಯಾರಣ್ಯಧಿಕಾರಿ ತ್ಯಾಗರಾಜ್ ಮತ್ತು ಸುಳ್ಯ ವಲಯಾರಣ್ಯಾಧಿಕಾರಿ ಮಂಜುನಾಥ್ ಅವರ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳು, ಸಿಬಂದಿಗಳು ಹಾಗೂ ಊರವರ ಸಹಕಾರದಿಂದ ಆನೆಯನ್ನು ಸಮತಟ್ಟಾದ ಸ್ಥಳಕ್ಕೆ ತರುವ ಪ್ರಯತ್ನ ನಡೆಯಿತು.

ವೈದ್ಯರು ಆನೆಗೆ ಅರಿವಳಿಕೆ ಚುಚ್ಚು ಮದ್ದು ನೀಡಿ ಪ್ರಜ್ಷೆ ತಪ್ಪಿಸಿ ಚಿಕಿತ್ಸೆ ಆರಂಬಿಸಿದರು. ಗಾಯಗೊಂಡ ಜಾಗಕ್ಕೆ ಔಷಧಿ ಸಿಂಪಡಿಸಿ ಶುಚಿತ್ವಗೊಳಿಸಿದರು. ಬಳಿಕ ಚುಚ್ಚುಮದ್ದು ನೀಡಲಾಯಿತು. ಬಳಿಕ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆ ಬಳಿಕ ಸ್ವಲ್ಪ ಹೊತ್ತಿನಲ್ಲಿ ಬಳಿಕ ಆನೆ ಪ್ರಜ್ಷೆ ಪಡೆದುಕೊಂಡು ತನ್ನ ಚಲನವಲನ ಆರಂಭಿಸಿತು.

ಆನೆಯ ಪಕ್ಕಕ್ಕೆ ತೆರಳಿದರೆ ಆನೆ ಕೋಪಗೊಳ್ಳುತ್ತಿತ್ತು ಹಾಗಾಗಿ ಅರಿವಳಿಕೆ ಮದ್ದು ಅನಿವಾರ್ಯವಾಗಿತ್ತು. ಆನೆಗೆ ೩ ಗಂಟೆ ಜ್ಞಾನ ತಪ್ಪಿಸಿ ವೈದ್ಯರು ಚಿಕಿತ್ಸೆ ನೀಡಿದರು. ಆನೆಯ ಮುಂಭಾಗದ ಕಾಲಿನ ಮೇಲದಭಾಗದಲ್ಲಿ ಗಾಯವಾಗಿತ್ತು. ಗಾಯದಲ್ಲಿ ಕೀವು ತುಂಬಿದ್ದ ಕಾರಣ ಆನೆ ನೋವಿನಲ್ಲಿ ಘೀಳಿಡುತ್ತಿತ್ತು. ವೈದ್ಯರು ಕೀವನ್ನು ತೆಗೆದು ಗಾಯಕ್ಕೆ ಔಷಧಿ ಹಚ್ಚಿ, ರೋಗ ನಿರೋಧಕ ಚುಚ್ಚುಮದ್ದು ನೀಡಿದರು. ಚಿಕಿತ್ಸೆಯ ಬಳಿಕ ಆನೆಗೆ ಎಚ್ಚರಗೊಳ್ಳಲು ಚುಚ್ಚುಮದ್ದು ನೀಡಲಾಯಿತು. ಆನೆ ಸಂಪೂರ್ಣ ಗುಣಮುಖ ಆಗುವ ವರೆಗೂಸುಬ್ರಹ್ಮಣ್ಯ ಅರಣ್ಯ ಇಲಾಖೆಯ ಸಿಬ್ಬಂಧಿ ನಿಗಾ ವಹಿಸಲಿದ್ದಾರೆ. ಕಾಡಿನಲ್ಲಿ ಆನೆಗಳು ಕಾದಾಟ ನಡೆಸಿದ ಕಾರಣಸುಮಾರು 17 ವರ್ಷ ವಯಸ್ಸಿನ ಈ ಗಂಡಾನೆ ಗಾಯಗೊಂಡಿದೆ. ಎಂದು ವೈದರು ತಿಳಿಸಿದ್ದಾರೆ.

ಗಾಯಗೊಂಡ ಆನೆಗೆ ಚಿಕಿತ್ಸೆ ಕಾಂiiಚರಣೆ ಯಶಶ್ವಿಯಾಗಿದೆ. ದಟ್ಟ ಕಾಡು ಪ್ರದೇಶದಲ್ಲಿ ಆನೆಯನ್ನು ಸುರಕ್ಷಿತ ಸ್ಥಳಕ್ಕೆ ತಂದು ಚಿಕಿತ್ಸೆ ನೀಡುವುದು ದೊಡ್ಡ ಸವಾಲಾಗಿತ್ತು. ತುಸು ಎಚ್ಚರ ತಪ್ಪಿದರು ಆನೆಯ ದೇಹಕ್ಕೆ ಗಾಯವಾಗುವ ಸಾಧ್ಯತೆಗಳಿತ್ತು. ವೈದ್ಯರ ಸೂಕ್ತ ಚಿಕಿತ್ಸೆ ವಿಧಾನ, ಸಿಬಂದಿಗಳ ಹಾಗೂ ವಿಶೇಷವಾಗಿ ಸ್ಥಳಿಯರು ನೀಡಿದ ಸಹಕಾರದಿಂದ ಚಿಕಿತ್ಸೆ ಕಾರ್ಯಾಚರಣೆ ಯಶಸ್ವಿಗೊಂಡಿದೆ. ಮುಂದಿನ ಒಂದು ವಾರಗಳ ಕಾಲ ಆನೆಯ ಆರೋಗ್ಯದ ಸ್ಥಿತಿಗತಿ ಅದರ ಚಲನವಲನದ ಮೇಲೆ ಸಿಬಂದಿಗಳು ನಿಗಾವಹಿಸುತ್ತಾರೆ ಎಂದು ಕಾರ್ಯಾಚರಣೆ ಬಳಿಕ ಎ.ಸಿಎಪ್ ಆಸ್ಟ್ರಿನ್ ಪಿ ಸೋನ್ಸ್ ಪ್ರತಿಕ್ರೀಯಿಸಿದರು.

ಗುತ್ತಿಗಾರು ಪಶುವೈದ್ಯಾಧಿಕಾರಿ ವೆಂಕಟಾಚಲಪತಿ ಸಹಕರಿಸಿದರು. ಫಾರೆಸ್ಟರ್ ಸಂತೋಷ್, ಸುಬ್ರಹ್ಮಣ್ಯ ಹಾಗೂ ಪಂಜ ವಲಯದ ಸಿಬಂದಿಗಳು ಕಳೆದೆರಡು ದಿನಗಳಿಂದ ಸತತ ಕಾರ್ಯಾಚರಣೆಯಲ್ಲಿ ಸಹಕರಿಸಿದರು. ಸ್ಥಳಿಯರು ಸಿಬಂದಿಗಳಿಗೆ ಊಟ, ವಸತಿ, ನೀರು ಇತ್ಯಾದಿ ಒದಗಿಸಿದರು.

Related posts

Leave a Reply

Your email address will not be published. Required fields are marked *