Header Ads
Header Ads
Breaking News

ಸುಬ್ರಹ್ಮಣ್ಯ ಶ್ರೀಗಳ ಉಪವಾಸ ಸ್ಥಗಿತಕ್ಕೆ ಪೇಜಾವರ ಶ್ರೀ ಮನವಿ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ – ಸುಬ್ರಹ್ಮಣ್ಯ ಮಠ ಜಟಾಪಟಿ ಹಿನ್ನೆಲೆಯಲ್ಲಿ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಉಪವಾಸ ಕೈಗೊಂಡ ವಿಚಾರದ ಬಗ್ಗೆ ಪ್ರತಿಕ್ರೀಯಿಸಿದ ಪೇಜಾವರ ಮಠದ ಹಿರಿಯ ಯತಿ ವಿಶ್ವೇಶತೀರ್ಥ ಶ್ರೀಪಾದರು ಕುಕ್ಕೆ ದೇವಸ್ಥಾನದ ಕಿರುಕುಳದಿಂದ ಸ್ವಾಮಿಗಳು ಬೇಸರಪಟ್ಟಿದ್ದಾರೆ.

ಇವತ್ತಿನಿಂದ ಸುಬ್ರಹ್ಮಣ್ಯ ಶ್ರೀಗಳು ಉಪವಾಸ ಆರಂಭ ಮಾಡಿದ್ದಾರೆ.ಉಪವಾಸದ ವಿಚಾರ ತಿಳಿದು ನಮಗೆ ಬಹಳ ಬೇಸರವಾಗಿದೆ.ದಸರಾ ಮಹೋತ್ಸವ ಸಂದರ್ಭ ಉಪವಾಸ ಮಾಡುವುದು ಸರಿಯಲ್ಲ.ಉಪವಾಸವನ್ನು ಕೂಡಲೇ ಶ್ರೀಗಳು ಸ್ಥಗಿತಗೊಳಿಸಬೇಕು.ದಸರಾ ಮುಗಿದ ಕೂಡಲೇ ನಾನು ಸುಬ್ರಹ್ಮಣ್ಯಕ್ಕೆ ಬರುತ್ತೇನೆ.ಪರಸ್ಪರ ಸಂಘರ್ಷ ಬಗೆಹರಿಸಲು ಪ್ರಯತ್ನಪಡುತ್ತೇನೆ ಮಠದಲ್ಲಿ ಸರ್ಪಸಂಸ್ಕಾರ ಮಾಡಿದರೆ ದೇವಸ್ಥಾನಕ್ಕೆ ಏನು ತೊಂದರೆಯಾಗಿದೆ?ಸಾರ್ವಜನಿಕರಿಗೆ – ಭಕ್ತರಿಗೆ ಏನು ನಷ್ಟ ಆಗಿದೆ? ಅನಾವಶ್ಯಕ ಗೊಂದಲ ಸಮಾಜದಲ್ಲಿ ನಡೆಯುವುದು ಸರಿಯಲ್ಲ.ದೇವಸ್ಥಾನ ಮತ್ತು ಮಠ ಹಿಂದೆ ಜೊತೆಗೆ ಇತ್ತು.ಸರ್ಪ ಸಂಸ್ಕಾರ ಎಲ್ಲೇ ಆದರೂ ಫಲ ದೇವರಿಗೆ ಸಲ್ಲುತ್ತದೆ.ಸೇವೆ ವಿಚಾರದಲ್ಲಿ ಯಾರು ಯಾರಿಗೂ ಒತ್ತಡ ಹೇರಬಾರದು.ಉಪವಾಸ ಮಾಡಿದರೆ ಹಿಂದೂ ಸಮಾಜಕ್ಕೆ ನಷ್ಟ.ಸಂಧಾನ ಫಲಿಸದಿದ್ದರೆ ಮುಖ್ಯಮಂತ್ರಿಗಳನ್ನು ಸಂಪರ್ಕಿಸುತ್ತೇನೆ.ವಿಚಾರವನ್ನು ಸಿಎಂ ಕುಮಾರಸ್ವಾಮಿ ಅವರ ಗಮನಕ್ಕೆ ತರುತ್ತೇನೆ. ಸುಬ್ರಹ್ಮಣ್ಯ ಶ್ರೀಗಳು ಉಪವಾಸ ಕೈಬಿಡುವಂತೆ ಪೇಜಾವರ ಶ್ರೀ ಮನವಿ ಮಾಡಿದರು.

Related posts

Leave a Reply