Header Ads
Header Ads
Breaking News

ಸುಬ್ರಹ್ಮಣ್ಯ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಧ್ಯಮ ಗೋಷ್ಟಿ ರಾಜಕೀಯದ ಆರೋಪ-ಪತ್ಯಾರೋಪದ ಮಧ್ಯೆ ಅಭಿವೃದ್ದಿ ಪತ್ರಿಕೋದ್ಯಮ ಕಣ್ಮರೆ ಉಜಿರೆ ಎಸ್‌ಡಿಎಂ ಕಾಲೇಜು ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಡಾ| ಭಾಸ್ಕರ ಹೆಗ್ಡೆ

ಸ್ಪರ್ಧಾತ್ಮಕ ಯಗದಲ್ಲಿ ಪತ್ರಕರ್ತರು ಒತ್ತಡದ ಬದುಕಿನ ಮಧ್ಯೆ ರಾಜಕೀಯದ ಆರೋಪ-ಪತ್ಯಾರೋಪದ ವರದಿಗಳ ಬಗ್ಗೆ ಬೆಳಕು ಚೆಲ್ಲುತ್ತಾರೆಯೇ ಹೊರತು ಅಭಿವೃದ್ದಿ ಪತ್ರಿಕೋದ್ಯಮದ ಬಗ್ಗೆ ವರದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಅಭಿವೃದ್ದಿ ಪತ್ರಿಕೋದ್ಯಮ ಕಣ್ಮರೆ ಆಗುತ್ತಿದೆ ಎಂದು ಉಜಿರೆ ಎಸ್.ಡಿ.ಎಂ ಕಾಲೇಜಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ| ಭಾಸ್ಕರ ಹೆಗ್ಡೆ ಹೇಳಿದರು.

ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಮಾಧ್ಯಮ- ಸಾಮಾಜಿಕ ಜವಾಬ್ದಾರಿ ಎಂಬ ವಿಷಯದ ಮೇಲೆ ನಡೆದ ಗೋಷ್ಟಿಯಲ್ಲಿ ಮಾತನಾಡಿ ಪತ್ರಕರ್ತರದ್ದು ಒತ್ತಡದ ಬದುಕು. ಈ ಬದುಕಿನಲ್ಲಿ ಕೂಡ ಪತ್ರಕರ್ತರ ಹೊಣೆಗಾರಿಕೆ ಮುಖ್ಯ. ಈಗಿನ ಮಾಧ್ಯಮಗಳು ಉದ್ಯಮವಾಗಿ ಬೆಳೆಯುತ್ತಿದೆ. ಪತ್ರಿಕೆಗಳನ್ನು ನಾವು ಜಾಹಿರಾತುದಾರರಿಗೆ ಮಾರಿಕೊಂಡಿದ್ದೇನೆ. ಇದರಿಂದ ಮಾಧ್ಯಮದ ಮೇಲೆ ಇರುವ ಮೌಲ್ಯ, ನಂಬಿಕೆಗಳು ಕಳೆದುಕೊಳ್ಳುತ್ತಿದೆ ಎಂದು ಹೇಳಿದರು.ದೃಶ್ಯ ಮಾಧ್ಯಮದ – ಸಾಮಾಜಿಕ ಜವಾಬ್ದಾರಿ ಬಗ್ಗೆ ಮಾತನಾಡಿ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ| ಮೌಲ್ಯ ಜೀವನ್ ರಾಮ್ ಮಾತನಾಡಿ ಒಂದು ಕಾಲದಲ್ಲಿ ಸುದ್ದಿಯ ಮೂಲವಾಗಿದ್ದ ಆಕಾಶವಾಣಿ ಮತ್ತು ದೂರದರ್ಶನಗಳು ಜನರಿಂದ ದೂರ ಆಗುತ್ತಿದೆ. ಟಿವಿ ಮಾಧ್ಯಮಗಳ ಸ್ಪರ್ಧೆಯಿಂದ ಇವತ್ತು ಮಾದ್ಯಮಗಳ ಸಾಮಾಜಿಕ ಹೊಣೆಗಾರಿಕೆ ಕಳೆದುಕೊಳ್ಳುತ್ತಿದೆ ಎಂದು ಹೇಳಿದರು.ಗೋಷ್ಟಿಯಲ್ಲಿ ಉದಯವಾಣಿ ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ, ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಎ.ಪಿ.ಮಾಲತಿ, ಜಿಲ್ಲಾ ಕ.ಸಾ.ಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕೆ.ಎಸ್.ಎಸ್ ಕಾಲೇಜಿನ ಪ್ರಾಂಶುಪಾಲ ಪ್ರೋ. ರಂಗಯ್ಯ ಶೆಟ್ಟಿಗಾರ್ ಉಪಸ್ಥಿತರಿದ್ದರು.

Related posts

Leave a Reply