
ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಸನ್ನಿಧಿಯಲ್ಲಿ ಮಹತ್ತರ ಸೇವೆಯೆಂದರೆ ಅದು ಉರುಳುಸೇವೆ.ಕಷ್ಟ ಕಾರ್ಪಣ್ಯಗಳ ನಿವಾರಣೆಗಾಗಿ, ಮನಶಾಂತಿಗಾಗಿ, ದೋಷಪರಿಹಾರಕ್ಕಾಗಿ ಭಕ್ತರು ಹರಕೆ ಹೊತ್ತು ಶ್ರೀ ಕ್ಷೇತ್ರದಲ್ಲಿ ಉರುಳು ಸೇವೆ ಮಾಡುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿ ಕೊಳ್ಳುತ್ತಿರುವ ಸೇವೆ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ನಂಬಿಕೆ.ಸುಬ್ರಹ್ಮಣ್ಯದ ನಿವಾಸಿಯಾಗಿರುವ , ಉದ್ಯಮಿಯೂ ಆಗಿರುವ ಸವಿತಾ ಭಟ್ ಇವರು ಕಳೆದ 12 ವರ್ಷಗಳಿಂದ ಬೀದಿ ಮಡಸ್ನಾನ ಮಾಡುತ್ತಿದ್ಧಾರೆ ಸುಮಾರು 3 ಕಿ. ಮೀ .ಅಂದರೆ ಕುಮಾರಧಾರಾ ನದಿಯಿಂದ ದೇವಾಲಯದಲ್ಲಿರುವ ದರ್ಪಣ ತೀರ್ಥದವರೆಗೂ ಯಾವುದೇ ಅಡೆ ತಡೆಗಳಿಲ್ಲದೆ ಬೀದಿ ಮಡಸ್ನಾನ ಸೇವೆಯನ್ನು ಮಾಡಿಕೊಂಡು ಬಂದಿದ್ದಾರೆ. ಇವರು ಡಿ.18 ರಂದು ಬೀದಿ ಮಾಡಸ್ನಾನ ನೆರವೇರಿಸಿ ಕಳೆದ 12 ವರ್ಷಗಳಿಂದ ನಿರಂತರ ಬೀದಿ ಮಾಡಸ್ನಾನ ಸೇವೆ ಗೈದ ಕ್ಷೇತ್ರದ ಭಕ್ತೆಯಾಗಿದ್ದಾರೆ.ಇವರು ಸುಬ್ರಹ್ಮಣ್ಯದ ವಾಣಿ ವನಿತಾ ಸಮಾಜದ ಅಧ್ಯಕ್ಷೆಯಾಗಿದ್ದು ಸುಬ್ರಹ್ಮಣ್ಯ ಜೆಸಿಐ ಕಾರ್ಯದರ್ಶಿಯಾಗಿದ್ದಾರೆ.
ತನ್ನ ನಿರಂತರವಾದ ಬೀದಿ ಮಡಸ್ನಾನದಿಂದ ಸಕಲ ಸಂಕಷ್ಟಗಳು ದೂರವಾಗಿ ತನಗೆ ದೇವರ ಅನುಗ್ರಹ ವಾಗಿದೆ ಎನ್ನುವ ಸವಿತ ಭಟ್ರವರು ಇನ್ನು ಮುಂದಕ್ಕೂ ಬೀದಿ ಮಾಡಸ್ನಾನ ಸೇವೆಯನ್ನು ಮುಂದುವರಿಸುವುದಾಗಿ ಹೇಳುತ್ತಾರೆ