Header Ads
Header Ads
Breaking News

ಸುರತ್ಕಲ್‌ನ ಕಾನಾ ಕಟ್ಲ ಪ್ರದೇಶದ ಕುಟುಂಬಗಳಿಗೆ ಹಕ್ಕುಪತ್ರ,  ಶಾಸಕ ಮೊಯ್ದಿನ್ ಬಾವಾರಿಂದ 120 ಕುಟುಂಬಗಳಿಗೆ ವಿತರಣೆ

ಸುರತ್ಕಲ್ ಸಮೀಪದ ಕಾನಾ ಕಟ್ಲ ಪ್ರದೇಶದ ಸುಮಾರು ೧೨೦ ಕುಟುಂಬಗಳಿಗೆ ಶಾಸಕ ಮೊಯ್ದಿನ್ ಬಾವಾರವರು ಮನೆ ವಾಸ್ತವ್ಯದ ಹಕ್ಕುಪತ್ರ ವಿತರಿಸಿದರು.
ಬಳಿಕ ಮಾತನಾಡಿದ ಶಾಸಕ ಮೊಯ್ದಿನ್ ಬಾವಾ ಈ ಪ್ರದೇಶದ ಇನ್ನಷ್ಟು ಜನರಿಗೆ ಹಕ್ಕುಪತ್ರ ಕೊಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಅನಂತರ ಮನಪಾ ಸದಸ್ಯೆ ಪ್ರತಿಭಾ ಕುಳಾಯಿ ಮಾತನಾಡಿ, ಶಾಸಕ ಮೊಯ್ದಿನ್ ಬಾವಾರವರು ಸ್ಥಳೀಯವಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ ಎಂದರು. ಈ ಸಂದರ್ಭ ಕಾಂಗ್ರೆಸ್ ಉಪಾಧ್ಯಕ್ಷ ರಾಘವೇಂದ್ರ ರಾವ್, ಹಮೀದ್ ಕಟ್ಲ, ರಾಜಾ ಸುರತ್ಕಲ್ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply